Sunday, November 24, 2024
ಬಂಟ್ವಾಳ

ಚಿಂತಾಜನಕ ಸ್ಧಿತಿಯಲ್ಲಿದ್ದ ತಾಯಿ, ತಾಯಿಗಿಂತ ಮೊದಲೇ ಪ್ರಾಣ ಬಿಟ್ಟ ಮಗ..! ‘ಕ್ಷಮಿಸು ಅಮ್ಮಾ’- ಕಹಳೆ ನ್ಯೂಸ್

ಬಂಟ್ವಾಳ : ಚಿಂತಾಜನಕ ಸ್ಧಿತಿಯಲ್ಲಿರುವ ತಾಯಿಯನ್ನ ಉಳಿಸಲಾಗೋದಿಲ್ಲ ಅನ್ನೋ ಕಾರಣಕ್ಕೆ, ತಾಯಿಗಿಂತ ಮೊದಲು ನನ್ನ ಪ್ರಾಣ ಹೋಗಲಿ ಎಂದು ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆನಂತಾಡಿ ಪಂತಡ್ಕ ನಿವಾಸಿ ನೀರಜ್ ಮೃತ ದುರ್ಥೈವಿ. ನೀರಜ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಕೆ,ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದರು, ಆದ್ರೆ ವೈದ್ಯರು ಇವರನ್ನ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

ಇದರಿಂದಾಗಿ ತಾಯಿಯನ್ನ ಉಳಿಸೋದಿಕ್ಕೆ ಆಗೋದಿಲ್ಲ ಎಂದು ಮಾನಸಿಕವಾಗಿ ನೊಂದ ಯುವಕ, ಸೋಮವಾರ ವಾಟ್ಸ್‍ಆಫ್‍ನಲ್ಲಿ ‘ ಓ ಯಮ ದೇವನೇ, ಹೆತ್ತ ತಾಯಿ ಸಾಯೋ ಮುನ್ನ , ಕರೆದುಕೋ ಒಮ್ಮೆ ನನ್ನ, ಅಮ್ಮಾ ಕ್ಷಮಿಸು ಎಂದು ಸ್ಟೇಟಸ್ ಹಾಕಿ,ಬಳಿಕ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡಿದ್ದ.

ಸೋಮವಾರ ರಾತ್ರಿಯಿಡಿ ಹುಡುಕಾಡಿದ್ರು ನೀರಜ್ ಪತ್ತೆಯಾಗಿರಲಿಲ್ಲ. ಇಂದು ಬೆಳ್ಳಗ್ಗೆ ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಧಳೀಯ ಈಜುಗಾರ ಮೊಹಮ್ಮದ್ ನಂದಾವರ ಹಾಗೂ ತಂಡ, ಬಂಟ್ವಾಳ ಅಗ್ನಿ ಶಾಮಕ ದಳದ ತಂಡ ಹುಡುಕಾಟ ನಡೆಸಿ, ಶವವನ್ನ ಮೇಲಕ್ಕೆ ಎತ್ತಿದ್ದಾರೆ. ಇನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.