Wednesday, January 22, 2025
ಪುತ್ತೂರು

ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕೌಶಲ್ಯಗಳು ಅಭಿವೃದ್ದಿಗೊಳ್ಳುತ್ತದೆ; ವಿನುತ್ ನಾಯಕ್-ಕಹಳೆ ನ್ಯೂಸ್

ಪುತ್ತೂರು : ಸಮಯ ಪರಿಪಾಲನೆ ಮತ್ತು ಉತ್ಸಾಹಗಳೊಂದಿಗೆ ಯಾವ ಸಮಯದಲ್ಲಿ ಏನು ಮಾಡಬೇಕು ಎಂಬ ತಿಳುವಳಿಕೆ ನಮ್ಮಲ್ಲಿ ಇರಬೇಕು. ಶಿಕ್ಷಣದೊಂದಿಗೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದು ಮುಖ್ಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವ ಕೆಲಸದಲ್ಲೂ ಹಿಂದೆ ಸರಿಯದೆ ಸಾಧನೆ ಮಾಡುವ ಛಲ ಇರಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ರೋವರ್ ವಿದ್ಯಾರ್ಥಿ ಮತ್ತು ಮಂಗಳೂರಿನ ಹೆಚ್‍ಡಿಫ್‍ಸಿ ಬ್ಯಾಂಕ್‍ನ ಸೇಲ್ಸ್ ಅಧಿಕಾರಿ ವಿನುತ್ ನಾಯಕ್ ಹೇಳಿದರು. ವಿವೇಕಾನಂದ ಕಾಲೇಜಿನ, ವಿವೇಕಾನಂದ ರೋವರ್ಸ್ ಕ್ರ್ಯೂ ಮತ್ತು ನಿವೇದಿತಾ ರೇಂಜರ್ಸ್ ತಂಡಗಳ ವಾರ್ಷಿಕ ಚಟುವಟಿಗಳಿಗೆ ಚಾಲನೆ ನೀಡಿ ಶನಿವಾರ ಅವರು ಮಾತನಾಡಿದ್ದರು. ಯಾವುದೇ ಕೆಲಸದಲ್ಲಿ ನಿರ್ದಿಷ್ಟವಾಗಿ ಇರುವ ನಿಯಮವನ್ನು ಪಾಲಿಸುವುದು ಉತ್ತಮ. ಸಮವಸ್ತ್ರಗಳ ಮೇಲೆ ಗೌರವ ಇರಬೇಕು. ಅದರೊಂದಿಗೆ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಅನುಭವಗಳು ಹೆಚ್ಚಾಗುತ್ತದೆ ಮತ್ತು ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕೌಶಲ್ಯಗಳು ಅಭಿವೃದ್ದಿಗೊಳ್ಳುತ್ತದೆ. ಇದರಲ್ಲಿ ಬರುವ ಪರೀಕ್ಷೆಗಳನ್ನು ಎದುರಿಸಿ, ಉದ್ಯೋಗದ ಕಡೆ ಗಮನಹರಿಸಿದಾಗ ಜೀವನದಲ್ಲಿ ಮುಂದುಬರಲು ಸಾಧ್ಯ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ ಯಾವುದೇ ಕೆಲಸ ಮಾಡುವಾಗ ಆಸಕ್ತಿ ಇಟ್ಟು ಮಾಡಬೇಕು, ಜೊತೆಗೆ ಧೈರ್ಯ ಬರಲು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ಅವಕಾಶಗಳು ಬಂದಾಗ ಬಳಸಿಕೊಂಡು ನಮ್ಮನ್ನು ನಾವು ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿ ಹೊಂದಲು ಇಂತಹ ಸಂಘ ಅವಕಾಶ ಕಲ್ಪಿಸುತ್ತಿದೆ ಅದ್ದರಿಂದ ಹೊರ ಜಗತ್ತಿನ ಜ್ಞಾನವನ್ನು ಅರಿತುಕೊಳ್ಳಿ ಎಂದು ಹೇಳಿದ್ದರು. ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ. ಎಸ್. ಮಾತನಾಡಿ ಶುಭ ಹಾರೈಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ರೇಂಜರ್ಸ್ ಹಾಗೂ ರೋವರ್ಸ್ ಯುನಿಟ್‍ನ ಸಂಯೋಜಕಿ ದೀಪಿಕಾ ಎಸ್. ಮತ್ತು ದಿವ್ಯಶ್ರೀ ಜಿ., ಕಾಲೇಜಿನ ರೇಂಜರ್ಸ್ ಹಾಗೂ ರೋವರ್ಸ್ ಯುನಿಟ್‍ನ ವಿದ್ಯಾರ್ಥಿ ನಾಯಕರಾದ ಗೌತಮಿ ಎಸ್. ಹೆಚ್. ಮತ್ತು ಕೀರ್ತನ್ ಡಿ. ಎನ್. ಉಪಸ್ಥಿತರಿದ್ದರು, ಸ್ಕೌಟ್ ಗೈಡ್ಸ್ ಪ್ರಾರ್ಥನೆಯೊಂದಿಗೆ, ಕಾಲೇಜಿನ ರೇಂಜರ್ಸ್ ಹಾಗೂ ರೋವರ್ಸ್ ಯುನಿಟ್‍ನ ಸಂಯೋಜಕ ಈಶ್ವರ ಪ್ರಸಾದ್ ಸ್ವಾಗತಿಸಿ, ಸಂಯೋಜಕ ಪುನೀತ್ ಎಸ್. ಧನ್ಯವಾದಿಸಿದರು. ಶಿಲ್ಪಾ ಬಿ. ಮತ್ತು ಸುಪ್ರೀಯಾ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು.