Tuesday, January 21, 2025
ಹೆಚ್ಚಿನ ಸುದ್ದಿ

ಅಭಿವೃದ್ಧಿಗಾಗಿ ಕಾಯುತ್ತಿರುವ ಟ್ಯಾಪ್ಮೀ-ಹಿರೇಬೆಟ್ಟು ಸಂಪರ್ಕಿಸುವ ರಸ್ತೆ-ಕಹಳೆ ನ್ಯೂಸ್

ಕಾಪು ವಿಧಾನ ಸಭಾ 80 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆ ಟ್ಯಾಪ್ಮೀ-ಹಿರೇಬೆಟ್ಟು ಸಂಪರ್ಕಿಸುವ ಈ ರಸ್ತೆಯು ಸಂಪೂರ್ಣ ದುರಸ್ತಿಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಒಂದು ವರ್ಷದಿಂದ ಈ ರಸ್ತೆಯು ಸಂಪೂರ್ಣ ಹಾಳಾಗಿದ್ದು ಡಾಮರ್ ರಸ್ತೆ ಇದೀಗ ಮಣ್ಣಿನ ರಸ್ತೆಯಾಗಿ ಪರಿವರ್ತನೆಯಾಗಿದೆ. ಈ ರಸ್ತೆಯನ್ನು ಅವಲಂಬಿಸಿರುವವರು ಸಾವಿರಾರು ಮಂದಿ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಶ್ವವಿಖ್ಯಾತ ವಿದ್ಯಾಸಂಸ್ಥೆ ಅದೇ ರೀತಿ ಸಾಲು ಮರದ ತಿಮ್ಮಕ್ಕ ಉದ್ಯಾನವನ ಸಂಪರ್ಕಿಸುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಮೌನವಹಿಸಿರುವುದು ಬೇಸರದ ವಿಚಾರ. ರಸ್ತೆಯಲ್ಲಿ ವಾಹನಗಳು ಬಿಡಿ ನಡೆದಾಡಲು ತೊಂದರೆಯಾಗಿದೆ. ಧೂಳಿನಿಂದ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಆದಷ್ಟು ಬೇಗ ಸಂಬಂಧಿಸಿದ ಜನಪ್ರತಿನಿಧಿ ಅಧಿಕಾರಿಗಳು ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರ ಪರವಾಗಿ ಸಾಮಾಜಿಕ ಚಿಂತಕ ರಾಘವೇಂದ್ರ ಪ್ರಭು, ಕರ್ವಾಲು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು