Tuesday, January 21, 2025
ಪುತ್ತೂರು

ಅಗಾಧವಾದ ಅವಕಾಶಗಳ ಅಗಾರವೇ ಈ ಪೋಲಿಸ್ ಇಲಾಖೆ ; ರವಿಚಂದ್ರ-ಕಹಳೆ ನ್ಯೂಸ್

ಪುತ್ತೂರು : ಪೋಲಿಸ್ ಅಂದರೆ ಅಗಾಧವಾದ ಅವಕಾಶಗಳ ಅಗಾರ. ಅಲ್ಲಿ ವ್ಯಕ್ತಿಯ ವಿದ್ಯೆಗೆ ಮತ್ತು ಪ್ರವೃತ್ತಿ ಗೆ ಬೇಕಾದ ಅವಕಾಶಗಳಿವೆ. ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡರೆ, ಒಳ್ಳೆಯ ಸಮಾಜವನ್ನು ಹುಟ್ಟು ಹಾಕಬಹುದು ಎಂದು ಮಂಗಳೂರು ಪೋಲಿಸ್ ಕಮಿಷನರೇಟ್‌ನ ಅಡ್ಮಿನಿಸ್ಟ್ರೇಟೀವ್ ಆಫೀಸರ್ ರವಿಚಂದ್ರ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಕಾಲೇಜಿನ ಪ್ಲೇಸ್‌ಮೆಂಟ್ ಹಾಗೂ ಟ್ರೇನಿಂಗ್ ಸೆಲ್, ಐಕ್ಯೂಎಸಿ ಘಟಕ, ಎನ್.ಸಿ.ಸಿ. ಮತ್ತು ರೆಡ್‌ಕ್ರಾಸ್ ಘಟಕಗಳು ಆಯೋಜಿಸಿದ ‘ಪೋಲಿಸ್ ಸೇವೆಯಲ್ಲಿ ವೃತ್ತಿ ಅವಕಾಶಗಳು’ ಎಂಬ ವಿಷಯದ ಕುರಿತು ಅವರು ಶನಿವಾರ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಆದಷ್ಟು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪ್ರಚಲಿತ ವಿಷಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಸಹಾಯವಾಗುತ್ತದೆ ಎಂದು ತಿಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಯಾರು ಉತ್ತಮ ಗುರಿ ಹೊಂದಿರುತ್ತಾರೋ, ಅವರು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಹಾಗೆಯೇ ವಿದ್ಯಾರ್ಥಿಗಳು ಗುರಿಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಯತ್ನಿಸುತ್ತಿರಬೇಕು. ಇದರಿಂದ ಸಾಮಾನ್ಯ ಜ್ಞಾನ ಹೊಂದಲು ಸಾಧ್ಯವಾಗುತ್ತದೆ ಎಂದರು. ವೇದಿಕೆಯಲ್ಲಿ ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಯೋಜಕಿ, ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗರತ್ನ ಸಿ. ಉಪಸ್ಥಿತರಿದ್ದರು. ಕಾಲೇಜಿನ ಪ್ಲೇಸ್‌ಮೆಂಟ್ ಹಾಗೂ ಟ್ರೇನಿಂಗ್ ಸೆಲ್‌ನ ಸಂಯೋಜಕಿ, ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಸ್ವಾಗತಿಸಿ, ಎನ್.ಸಿ.ಸಿ. ಘಟಕದ ಸಂಯೋಜಕ, ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಬಿ. ಅತುಲ್ ಶೆಣೈ ವಂದಿಸಿದರು. ಪ್ಲೇಸ್‌ಮೆಂಟ್ ಹಾಗೂ ಟ್ರೇನಿಂಗ್ ಸೆಲ್‌ನ ಸದಸ್ಯೆ, ಕಾಲೇಜಿನ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕಿ ಜೀವಿತಾ ಎನ್.ಕೆ. ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು