Tuesday, January 21, 2025
ಹೆಚ್ಚಿನ ಸುದ್ದಿ

ರಾಷ್ಟ್ರಕಲ್ಯಾಣ ಮತ್ತು ವಿಶ್ವಕಲ್ಯಾಣಕ್ಕಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡಿ !- ಸದ್ಗುರು (ಡಾ) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ-ಕಹಳೆ ನ್ಯೂಸ್

ಚಲನಚಿತ್ರಗಳು, ವೆಬ್‍ಸೀರಿಸ್ ಇತ್ಯಾದಿಗಳ ಮೂಲಕ ಹಿಂದೂದ್ವೇಷ ಪಸರಿಸುವ ಸಂಚನ್ನು ರೂಪಿಸಲಾಗಿದೆ. ಇದನ್ನು ನಿಗ್ರಹಿಸಲು ‘ದೇವ ನಿಂದನೆ ವಿರೋಧಿ ಕಾನೂನಿನ ಆವಶ್ಯಕತೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರವು ದೇವ ನಿಂದನೆ ವಿರೋಧಿ ಕಾನೂನನ್ನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ. ಹಿಂದೂಗಳಿಗೆ ಮೊಘಲರ ದಬ್ಬಾಳಿಕೆಯ ಇತಿಹಾಸವನ್ನು ಮರೆಯುವಂತೆ ಮಾಡುವ ಮೂಲಕ ಹಿಂದೂಗಳನ್ನು ಅಸಹಿಷ್ಣುಗಳನ್ನಾಗಿ ಮಾಡಲಾಗುತ್ತಿದೆ; ಆದರೆ ಈ ಪ್ರಯತ್ನಕ್ಕೆ ಬಲಿಯಾಗದೇ ನಿಜವಾದ ಇತಿಹಾಸವನ್ನು ಕಲಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ರೈತ ಆಂದೋಲನದ ಹೆಸರಿನಲ್ಲಿ ಗಣರಾಜ್ಯೋತ್ಸವದ ಮಹತ್ವದ ದಿನದಂದು ದೆಹಲಿಯೊಳಗೆ ನುಗ್ಗಿ ಹಿಂಸಾಚಾರ ಮಾಡಲಾಯಿತು. ಈ ಆಂದೋಲನದಲ್ಲಿಯೂ ಭಾರತವಿರೋಧಿ ಸಂಘಟನೆಗಳು ಸಕ್ರಿಯವಾಗಿವೆ ಎಂಬುದು ಬಯಲಾಗಿವೆ. ಆದರೆ, ಹಿಂದೂಗಳು ಪ್ರತಿಭಟಿಸಿದರೆ ಅವರ ವಿರುದ್ಧ ಹಿಂಸಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಮತ್ತು ರಾಷ್ಟ್ರಕಲ್ಯಾಣ ಹಾಗೂ ವಿಶ್ವಕಲ್ಯಾಣಕ್ಕಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರತಿಜ್ಞೆ ಮಾಡಿ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಮನವಿ ಮಾಡಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಆನ್‍ಲೈನ್’ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಸಭೆಯ ಆರಂಭದಲ್ಲಿ ಶಂಖನಾದ ಮಾಡಲಾಯಿತು. ಅನಂತರ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ದೀಪಪ್ರಜ್ವಲನೆ ಮಾಡಿದರು. ವೇದ ಮಂತ್ರ ಘೋಷದ ನಂತರ ಸಭೆಯು ವಕ್ತಾರರ ಜ್ವಲಂತ ಭಾಷಣಗಳನ್ನು ಆಲಿಸಿತು. ಈ ಸಭೆಯನ್ನು ‘ಯೂಟ್ಯೂಬ್ ಲೈವ್’ ಮತ್ತು ಫೇಸ್‍ಬುಕ್‍ನಲ್ಲಿ 38,250 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.