Monday, January 20, 2025
ಹೆಚ್ಚಿನ ಸುದ್ದಿ

ಧರ್ಮದ ರಕ್ಷಣೆಯ ಕಾರ್ಯದಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಹಿಂದೂಗಳು ಸಂಘಟಿತರಾದರೆ ಹಿಂದೂ ರಾಷ್ಟ್ರದ ಸ್ಥಾಪನೆ ದೂರವಿಲ್ಲ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ-ಕಹಳೆ ನ್ಯೂಸ್

ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗುವ ವಿಶೇಷ ಆದ್ಯತೆಗಳು ಮತ್ತು ರಿಯಾಯಿತಿಗಳಿಂದಾಗಿ, ವಿವಿಧ ರೀತಿಯ ‘ಜಿಹಾದ್’ಗಳು ತಲೆ ಎತ್ತುತ್ತಿವೆ. ಹಿಂದೂಗಳನ್ನು ತಮ್ಮ ದಬ್ಬಾಳಿಕೆಯ ಇತಿಹಾಸವನ್ನು ಮರೆಯುವಂತೆ ಮಾಡಿ ಅಸಹಿಷ್ಣುಗಳೆಂದು ಬಿಂಬಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ಅಪಪ್ರಚಾರವನ್ನು ಮರೆಯದೆ ನಿಜವಾದ ಇತಿಹಾಸವನ್ನು ಕಲಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ಇಂದು ‘ಹಲಾಲ್ ಸರ್ಟಿಫಿಕೇಟ್’ ಎಂಬ ಹೊಸ ಸಮಾನಾಂತರ ಆರ್ಥಿಕತೆಯನ್ನು ರಚಿಸಲಾಗಿದೆ ಮತ್ತು ಅದರಿಂದ ಬರುವ ಹಣವನ್ನು ಭಾರತದಲ್ಲಿ ಅಪರಾಧಗಳಿಗೆ ಬಳಸಲಾಗುತ್ತಿದೆ. ಅದಕ್ಕಾಗಿ ‘ಹಲಾಲ್’ ಮುದ್ರೆ ಇರುವ ಉತ್ಪನ್ನಗಳನ್ನು ಖರೀದಿಸಬೇಡಿ. ಧರ್ಮ ರಕ್ಷಣೆಯ ಕಾರ್ಯದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು, ಸಂಘಟಿತ ಶಕ್ತಿ ತೋರಿಸಿದರೆ ಹಿಂದೂ ರಾಷ್ಟ್ರದ ಸ್ಥಾಪನೆ ದೂರವಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಹೇಳಿದ್ದಾರೆ.

ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಆನ್‍ಲೈನ್’ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ ಯಲ್ಲಿ ಮಾತನಾಡುತ್ತಿದ್ದರು. ಸಭೆಯು ಶಂಖನಾದದಿಂದ ಪ್ರಾರಂಭವಾಯಿತು. ಅನಂತರ ಸನಾತನ ಸಂಸ್ಥೆಯ ಸದ್ಗುರು ನಂದಕುಮಾರ್ ಜಾಧವ್ ಇವರು ದೀಪಪ್ರಜ್ವಲನೆ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ, ವೇದಮಂತ್ರವನ್ನು ಪಠಿಸಲಾಯಿತು. ನಂತರ ಮುಖ್ಯ ವಕ್ತಾರರ ಭಾಷಣಗಳಾದವು. ಈ ಸಭೆಯನ್ನು ‘ಯೂಟ್ಯೂಬ್ ಲೈವ್’ ಮತ್ತು ‘ಫೇಸ್‍ಬುಕ್’ನಲ್ಲಿ 78 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು. ಸಭೆಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಇವರು ಮಾತನಾಡುತ್ತಾ, ಹಿಂದೂ ಧರ್ಮವು ಯಾವುದೇ ಧರ್ಮವನ್ನು ಕೀಳಾಗಿ ಕಂಡಿಲ್ಲ. ದೇವರು ಒಬ್ಬನೇ; ಆದರೆ ಅವನ ಸ್ವರೂಪ ಬೇರೆಬೇರೆಯಾಗಿದೆ ಎಂದು ಹಿಂದೂ ಧರ್ಮವು ಕಲಿಸುತ್ತದೆ. ಅನೇಕ ವಿದೇಶಿಯರು ಭಾರತದ ಮೇಲೆ ದಾಳಿ ನಡೆಸಿ ಹಿಂದೂಗಳ ಮೇಲೆ ಅನೇಕ ದೌರ್ಜನ್ಯಗಳನ್ನು ನಡೆಸಿದರು,