Monday, January 20, 2025
ಸುದ್ದಿ

ಕೋಟಿ ಚೆನ್ನಯ್ಯರ ಹಾಗೂ ಬಿಲ್ಲವ ಸಮುದಾಯದ ಕುರಿತು ಅವಹೇಳನಗೈದ ಜಗದೀಶ್ ಅಧಿಕಾರಿಯಿಂದ ಕ್ಷಮೆಯಾಚನೆ-ಕಹಳೆ ನ್ಯೂಸ್

ಮಂಗಳೂರು : ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಕೋಟಿ ಚೆನ್ನಯ್ಯ, ಬಿಲ್ಲವ ಸಮುದಾಯ ಹಾಗೂ ಜನಾರ್ದನ ಪೂಜಾರಿಯವರನ್ನು ಅವಮಾನ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಕೋಟಿ ಚೆನ್ನಯರ ಗರಡಿಯಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಅಲ್ಲದೇ ಇಂದು ಮೂಡುಬಿದಿರೆ ಸಮೀಪದ ಕೆಲ್ಲಪುತ್ತಿಗೆಯ ಪುರಾತನ ಶ್ರೀ ಕ್ಷೇತ್ರ ಭೂತರಾಜಗುಡ್ಡೆಯ ಶ್ರೀ ಧರ್ಮರಸು ದೈವ , ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿ, ತಪ್ಪು ಕಾಣಿಕೆ ಸಲ್ಲಿಸಿ, ದೈವದೇವರ ಮುಂದೆ ಕ್ಷಮೆಯಾಚನೆ ಮಾಡಿದರು. ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ಕೂಡ ಇದರಿಂದ ನೊಂದಿದ್ದಾರೆ. ಈ ಕಾರಣದಿಂದ ತಾನು ಕ್ಷಮೆಯಾಚನೆ ಮಾಡುತ್ತಿದ್ದೇನೆ. ತನ್ನ ಮಾತಿನಿಂದ ಉಂಟಾದ ವಿವಾದಕ್ಕೆ ಕೋಟಿ ಚೆನ್ನಯರ ಗರಡಿಯಲ್ಲಿಯೇ ಬಂದು ನಿಂತು ಕ್ಷಮೆಯಾಚಿಸಿ, ತಪ್ಪು ಕಾಣಿಕೆ ಸಲ್ಲಿಸುವ ಮೂಲಕ ಎಲ್ಲಾ ವಿವಾದಗಳಿಗೆ ತಾನು ಇತಿಶ್ರೀ ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು