ಬಂಟ್ವಾಳ : ಬಂಟ್ವಾಳ ಇಲ್ಲಿನ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಸಾಮಾಜಿಕ ಸಂಘಟನೆಗಳ ಬೆಂಬ¯ದೊಂದಿಗೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಶಾಶ್ವತವಾಗಿ ತೆರವುಗೊಳಿಸುವಂತೆ ಒತ್ತಾಯಿಸಿ ಬೃಹತ್ ಹೆದ್ದಾರಿ ತಡೆಯನ್ನು ಮಾ.9 ರಂದು ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ತೀರ್ಮಾನ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಹಾಗೂ ಹಿರಿಯ ವಕೀಲ ಉಮೇಶ್ ಕುಮಾರ್ ವೈ ಮಾತನಾಡಿದ ನಿಟ್ಟಿನಲ್ಲಿ ಹೋರಾಟವನ್ನು ಪರಿಣಾಮಕಾರಿಯಾಗಿ ನಡೆಸಲು ತೀರ್ಮಾನಿಸಬೇಕಾಗಿದ್ದು, ಜೊತೆಜೊತೆಗೆ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಬೇಕಾಗಿದೆ. ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ ಹಾಕಬೇಕಿದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಸಮಾನ ಮನಸ್ಕ ಸಂಘಟನೆಯು ರಾಜಕೀಯೇತರ ಸಂಘಟನೆಯಾಗಿ ಕಾರ್ಯಾಚರಿಸಿತ್ತಿದೆ. ಸಾಮಾಜಿಕ ಹೋರಾಟಗಳನ್ನು ಬೆಂಬಲಿಸಲು ಇಚ್ಚಿಸುವ ಯಾವುದೇ ಸಂಘಟನೆಗಳು ನಮ್ಮ ಸೇರಿಕೊಳ್ಳಬಹುದು ಎಂದು ಸಮಿತಿಯ ಅಧ್ಯಕ್ಷರು ಹೇಳಿದರು. ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಅಣ್ಣುಪೂಜಾರಿ, ಕಾರ್ಯದರ್ಶಿ ಸುರೇಶ್ ಕುಲಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ವಿವಿಧ ವಾಹನ ಚಾಲಕ, ಮಾಲಕ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು. ಅಂದು ಬೆಳಿಗ್ಗೆ 10 ಗಂಟೆಗೆ ಹೆದ್ದಾರಿ ತಡೆ ಶಾಂತಿಯುತವಾಗಿ ನಡೆಯಲಿದೆ. ಈ ನ್ಯಾಯ ಪರ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವಂತೆ ಸಮಿತಿ ಆಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ ಮತ್ತು ಕಾರ್ಯದರ್ಶಿ ಬಿ.ಶೇಖರ್ ವಿನಂತಿಸಿದರು.