ನವದೆಹಲಿ : ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತೈಲ ಸಂಸ್ಥೆಗಳು ಹೆಚ್ಚಳ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 35 ಪೈಸೆ, ಮತ್ತು ಡೀಸೆಲ್ ದರ ಲೀಡರ್ ಗೆ 25 ಪೈಸೆ ಏರಿಕೆಯಾಗಿದೆ.
ದೇಶದ ಪ್ರಮುಖ ನಗರಗಳಾದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 90.53 ರೂಪಾಯಿಗಳು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 82.40 ರೂಪಾಯಿಗಳು. ಮತ್ತು ಚೆನ್ನೈ ನಲ್ಲಿ ಪೆಟ್ರೋಲ್ ದರ 89.96 ಮತ್ತು ಡೀಸೆಲ್ ದರ 82.90, ಹೈದರಾಬಾದ್ ನಲ್ಲಿ ಪೆಟ್ರೋಲ್ ದರ 91.09 ಮತ್ತು ಡೀಸೆಲ್ ದರ 84.79, ಮುಂಬೈನಲ್ಲಿ ಪೆಟ್ರೋಲ್ ದರ 94.12 ಮತ್ತು ಡೀಸೆಲ್ ದರ 84.63, ದೆಹಲಿಯಲ್ಲಿ ಪೆಟ್ರೋಲ್ ದರ 87.60 ಮತ್ತು ಡೀಸೆಲ್ ದರ 77.73, ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ 88.92 ಮತ್ತು ಡೀಸೆಲ್ ದರ 81.31 ರೂಪಾಯಿಗಳು. ಕೊರೋನಾ ಕಾರಣದಿಂದಾಗಿ ತೈಲ ಉತ್ಪಾದನೆ ಕುಸಿದಿರುವುದು ಬೆಲೆ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.