Friday, January 24, 2025
ಹೆಚ್ಚಿನ ಸುದ್ದಿ

‘ವ್ಯಾಲೆಂಟೈನ್ ಡೇ’ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯುವ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿಗಳು ಹಾಗೂ ಉಪ ಕಮಿಷನರ್ ಇವರಿಗೆ ಮನವಿ !-ಕಹಳೆ ನ್ಯೂಸ್

ಕಳೆದ ಅನೇಕ ವರ್ಷಗಳಿಂದ ಭಾರತದಂತಹ ಸಾಂಸ್ಕøತಿಕ ದೇಶದಲ್ಲಿ 14 ಫೆಬ್ರವರಿಯಂದು ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ಧೇಶದಿಂದ ಪಾಶ್ಚಾತ್ಯರ ಈ ಅಂಧಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಶ್ಚಾತ್ಯರ ಈ ವ್ಯಾಲೆಂಟೈನ್ ಡೇ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇದದ ಸಂಗತಿಯಾಗಿದೆ. ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ದೂಮಪಾನ ಮಾಡುವುದು, ಡ್ರಗ್ ಸೇವನೆ ಮುಂತಾದ ವ್ಯಸನಗಳಿಗೆ ಬಲಿಯಾಗುವುದರ ಜೊತೆಗೆ ಅನುಚಿತ ಘಟನೆಗಳ ಪ್ರಮಾಣವೂ ಕೂಡ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಸಮೀಕ್ಷೆಯ ಪ್ರಕಾರ ಈ ದಿನದಂದು ಗರ್ಭನಿರೋಧಕಗಳ ಮಾರಾಟ ಅಧಿಕವಾಗುತ್ತಿದೆ.

ಇದು ಅನೈತಿಕತೆ ಹೆಚ್ಚಾಗುತ್ತಿರುವುದರ ಧ್ಯೋತಕವಾಗಿದೆ. ವ್ಯಾಲೆಂಟೈನ್ ಡೇ ಕಾರಣ ಶಾಲಾ-ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣವು ಹಾಳಾಗುವುದರ ಜೊತೆಗೆ ಕಾನೂನು ಸುವ್ಯಸ್ಥೆಯ ಪ್ರಶ್ನೆಯು ನಿರ್ಮಾಣವಾಗುವ ಭೋಗವಾದಿ ವೃತ್ತಿಯು ಹೆಚ್ಚಾಗಿ, ಸರಕಾರದ ಮೇಲೆ ಹೆಚ್ಚುವರಿ ಒತ್ತಡ ನಿರ್ಮಾಣವಾಗುತ್ತಿದೆ. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಪ್ರೇಮಿಗಳ ದಿನದ ವಿರುದ್ಧ ಕಳೆದ ಅನೇಕ ವರ್ಷಗಳಿಂದ ಜಾಗೃತಿ ಅಭಿಯಾನಗಳನ್ನು ಆಯೋಜನೆ ಮಾಡುತ್ತಾ ಬಂದಿದೆ.

ವ್ಯಾಲೆಂಟೈನ್ ಡೇ ಯಂದು ವಿಶೇಷ ಪೊಲೀಸ್ ದಳವನ್ನು ರಚಿಸಿ ಶಾಲಾ-ಕಾಲೇಜುಗಳಲ್ಲಿ ಅಯೋಗ್ಯ ಕೃತ್ಯಗಳನ್ನು ಮಾಡುವವರ ಮತ್ತು ವೇಗದಿಂದ ವಾಹನ ಓಡಿಸುವವರ ವಿರುದ್ಧ ಕ್ರಮ ಜರುಗಿಸಬೇಕು, ಪ್ರೇಮಿಗಳ ದಿನದಂದು ನಡೆಯುವ ತಪ್ಪು ಆಚರಣೆಗಳನ್ನು ಗಮನದಲ್ಲಿರಿಸಿ ಪಾರ್ಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವಂತಹ ಅಯೋಗ್ಯ ಕೃತಿಗಳನ್ನು ತಡೆಯುದರ ಜೊತೆಗೆ ಇಂತಹ ಅಯೋಗ್ಯ ಆಚರಣೆಗಳಿಗೆ ಪ್ರೋತ್ಸಾಹ ನೀಡುವ ಶಾಲಾ ಕಾಲೇಜುಗಳಿಗೆ ನಿರ್ದೇಶನ ನೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀಪ್ರಸಾದ್, ಐ. ಪಿ. ಎಸ್. ಉಪ ಕಮಿಷನರ್ ಹರಿ ರಾಮ್ ಶಂಕರ್ ಹಾಗೂ ಜಿಲ್ಲಾಧಿಕಾರಿಯವರ ಪರವಾಗಿ ಸಹಾಯಕ ನಿರ್ದೇಶಕರಾದ ಎ. ಡಿ. ಬೋಪಯ್ಯ ಇವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶ್ರೀ. ಲೋಕೇಶ್ ಉಳ್ಳಾಲ, ಶ್ರೀ. ಕಾರ್ತಿಕ್ ಬಿಜೈ, ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಧನುಷ್ ಮೆಲ್ಕಾರ್, ಶ್ರೀ. ಕೃಷ್ಣ ಬಂಗೇರ ಕುಳಾಯಿ,