Friday, January 24, 2025
ಹೆಚ್ಚಿನ ಸುದ್ದಿ

ತೋಟಗಾರಿಕಾ ಇಲಾಖೆ ,ಜಿಲ್ಲಾ ಪಂಚಾಯತ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿದ್ದೊದೇಶ ಸಹಕಾರಿ ಸಂಘ(ನಿ) ಲ್ಯಾಂಪ್ಸ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಜೇನು ಕೃಷಿಯ ಬಗ್ಗೆ ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷತೆಯ ಬಗ್ಗೆ ಕಾರ್ಯಕ್ರಮ-ಕಹಳೆ ನ್ಯೂಸ್

ತೋಟಗಾರಿಕಾ ಇಲಾಖೆ ,ಜಿಲ್ಲಾ ಪಂಚಾಯತ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿದ್ದೊದೇಶ ಸಹಕಾರಿ ಸಂಘ(ನಿ) ಲ್ಯಾಂಪ್ಸ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ಶಿರ್ಲಾಲು ಗ್ರಾಮ ಪಂಚಾಯತ್ ವಠಾರದಲ್ಲಿ ಜೇನು ಕೃಷಿಯ ಬಗ್ಗೆ ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷತೆಯ ಬಗ್ಗೆ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜಯಶೀಲ ಅಧ್ಯಕ್ಷೀಯ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೂ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿದ್ದೊದೇಶ ಸಹಕಾರ ಸಂಘ(ನಿ) ಲ್ಯಾಂಪ್ಸ್ ಇದರ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ ಉರುವಾಲು ಇವರು ಲ್ಯಾಂಪ್ಸ್ ಸಹಕಾರಿ ಸಂಘದ ಬಗ್ಗೆ ಮಾಹಿತಿ ನೀಡಿದರು ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಸರಕಾರದ ಯೋಜನೆಯಡಿ ಮನೆ ನಿರ್ಮಿಸಿರುವ ನಂದಗೋಕುಲ ಯೋಜನೆಯ ಬಗ್ಗೆ ವಿವರಿಸಿದರು.

ಮತ್ತು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಚಂದ್ರಶೇಖರ್ ಇವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ತೋಟಗಾರಿಕಾ ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಹಾಗೆಯೇ ಶಿರ್ಲಾಲು ಗ್ರಾಮ ಪಂಚಾಯತ್ ಇದರ ಅಭಿವೃದ್ಧಿ ಅಧಿಕಾರಿ ರಾಜು ಇವರು ಮಾತನಾಡುತ್ತಾ ಲ್ಯಾಂಪ್ಸ್ ಸಹಕಾರಿ ಸಂಘದ, ನಂದಗೋಕುಲ ಯೋಜನೆಯು ಬಹಳ ಉತ್ತಮ ಯೋಜನೆಯಾಗಿದ್ದು ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಯೋಜನೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳಿಗೆ ಮಂಜೂರಾದ ಮನೆಗಳು ಸಂಪೂರ್ಣಗೊಳ್ಳದೆ ನಿಷ್ಕ್ರಿಯವಾಗಿರುತ್ತದೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಲ್ಯಾಂಪ್ಸ್ ಸಹಕಾರಿ ಸಂಘವು ನಿರ್ವಹಿಸಿ ಮನೆ ನಿರ್ಮಿಸಿ ಕೊಡುವ ನಂದಗೋಕುಲ ಯೋಜನೆಯು ಬಹಳ ಪ್ರಯೋಜನಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಗೂ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಶ್ಯಾಮ ಭಟ್, ಉಮೇಶ್ ನಾಯ್ಕ ಮತ್ತು ಶೀನಪ್ಪ ಮಲೆಕುಡಿಯ ಉಪಸ್ಧಿತರಿದ್ದರು. ಮತ್ತು ಅಧಿಕ ಸಂಖ್ಯೆಯ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.