Friday, January 24, 2025
ಹೆಚ್ಚಿನ ಸುದ್ದಿ

ಸನಾತನ ಪ್ರಭಾತ ಪತ್ರಿಕೆಯ 22 ನೇ ವರ್ಷದ ವರ್ಧಂತಿ ಉತ್ಸವ ಕಾರ್ಯಕ್ರಮ -ಕಹಳೆ ನ್ಯೂಸ್

ಸನಾತನ ಪ್ರಭಾತ ಕನ್ನಡ ವಾರ ಪತ್ರಿಕೆಯು ಕಳೆದ 22 ವರ್ಷಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದಿಂದ ನಿರಂತರವಾಗಿ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿ ಮತ್ತು ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಿಂದೂಗಳನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಿಕೆಯಲ್ಲಿ ವಿಶೇಷವಾಗಿ ಆಧ್ಯಾತ್ಮಿಕ ಸಾಧನೆ, ಸಂಕಟಕಾಲವನ್ನು ಎದುರಿಸುವ ಬಗ್ಗೆ ಜಾಗೃತಿ ಮೂಡಿಸುವ ಲೇಖನ, ರಾಷ್ಟ್ರ ರಕ್ಷಣೆ, ಹಬ್ಬ, ಉತ್ಸವಗಳ ಬಗ್ಗೆ ಧರ್ಮಶಾಶ್ತ್ರದ ಮಾಹಿತಿಯನ್ನು ಮುದ್ರಿಸಲಾಗುತ್ತಿದೆ. ಪತ್ರಿಕೆಯ ಸಂಪಾದಕರಿಂದ ವಿತರಕರ ವರೆಗೆ ಯಾರೂ ಸಹ ವೇತನವನ್ನು ಪಡೆಯದೇ ಸೇವಾಭಾವದಿಂದ ಕೇವಲ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಡೆಸಲ್ಪಡುವ ಏಕೈಕ ಪತ್ರಿಕೆಯಾಗಿದೆ. ಇದರ 22 ನೇ ವರ್ಷದ ವರ್ಧಂತಿ ಉತ್ಸವವನ್ನು ಆನಲೈನ್ ಮೂಲಕ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಫೆಬ್ರವರಿ 13 ರಂದು ಸಂಜೆ 6 ರಿಂದ ನಡೆಯಲ್ಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರುಗಳಾದ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ದ.ಕ. ಜಿಲ್ಲೆ, ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ, ಶ್ರೀ. ಪ್ರಮೋದ್ ಮುತಾಲಿಕ್, ಸಂಸ್ಥಾಪಕರು, ಶ್ರೀರಾಮ ಸೇನೆ. ಮತ್ತು ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್, ಹಾಗೂ ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ. ಅವರುಗಳು ಭಾಗವಹಿಸಲಿದ್ದು, ಈ ಕಾರ್ಯಕ್ರಮವು Youtube.com/sskarnataka ಮತ್ತು FB.com/Sanatan.Prabhat.Kannada ಈ ಮೂಲಕ ಪ್ರಸಾರವಾಗಲಿದೆ. ಹಾಗೂ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು