Sunday, November 24, 2024
ಹೆಚ್ಚಿನ ಸುದ್ದಿ

ಭಾರತೀಯ ಜನತಾ ಪಾರ್ಟಿ ಎನ್ನುವುದು ಆಲದ ಮರದಂತೆ ವಿಶಾಲವಾಗಿದೆ; ಶಾಸಕ ವೇದವ್ಯಾಸ ಕಾಮತ್-ಕಹಳೆ ನ್ಯೂಸ್

ಮುಗ್ರೋಡಿ : ಶಕ್ತಿನಗರ ಮುಗ್ರೋಡಿಯ ಹಿಂದೂ ಸಭಾ ಭವನದಲ್ಲಿ ಬಿಜೆಪಿ ವಾರ್ಡ್ 21ರ ಪದವು, ಪಶ್ಚಿಮ ಮಂಗಳೂರು ಕಾರ್ಯಕರ್ತರ ಸಮಾವೇಶ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಪಕ್ಷದ ಕಾರ್ಯವನ್ನು ವೈಯಕ್ತಿಕ ಜೀವನದ ಒಂದು ಭಾಗವಾಗಿ ಪರಿಗಣಿಸಿ ದುಡಿಯುವ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ ದೊರೆಯುವುದು ಎಂದು ಹೇಳಿದ್ದಾರೆ. ಭಾರತೀಯ ಜನತಾ ಪಾರ್ಟಿ ಎನ್ನುವುದು ಆಲದ ಮರದಂತೆ ವಿಶಾಲವಾಗಿದೆ. ಹಳೆಯ ಬೇರುಗಳು ಹೊಸ ಚಿಗುರಿಗೆ ನೀರುಣಿಸುವಂತೆ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರು ಯುವ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಬೇಕು. ಹಾಗಾದಾಗ ಮಾತ್ರ ಪಕ್ಷ ಮತ್ತಷ್ಟು ಶಕ್ತಿಯುತವಾಗುತ್ತದೆ ಎಂದರು. ಸಭಾದ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ ಎನ್ನುವುದಕ್ಕೆ ಈ ಕಾರ್ಯಕರ್ತರ ಸಮಾವೇಶ ಸಾಕ್ಷಿಯಾಗಿದೆ. ಜಿಲ್ಲಾ ಮಟ್ಟದ, ಮಂಡಲ ಮಟ್ಟದ ನಾಯಕರು ಹಾಗೂ ಜನಪ್ರತಿನಿಧಿಗಳು ಕಾರ್ಯಕರ್ತರ ಬಳಿಗೆ ಬಂದು ಸಲಹೆ ಕೇಳುತ್ತಾರೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರವೇ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ, ರಾಜ್ಯ ಮೀನುಗಾರಿಕಾ ನಿಗಮ ಮಂಡಳಿಯ ಅಧ್ಯಕ್ಷ ನಿತಿನ್ ಕುಮಾರ್, ಮಂಡಲದ ಉಸ್ತುವಾರಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕಸ್ತೂರಿ ಪಂಜ,ಮಂಡಲದ ಪ್ರಭಾರಿ ಹಾಗೂ ಮೈಸೂರು ಇಲೆಕ್ಟ್ರಿಕಲ್ ಅಧ್ಯಕ್ಷರಾದ ಸಂತೋಷ್  ರೈ ಬೋಳಿಯಾರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರ್, ರಾಜ್ಯ ಪಂಚಾಯತ್ ರಾಜ್ ಪ್ರಕೋಷ್ಟದ ಸಹ ಸಂಚಾಲಕ ಪ್ರೇಮಾನಂದ ಶೆಟ್ಟಿ , ಜಿಲ್ಲಾ ಪ್ರಭಾರಿ ಭರತೇಶ, ಈಶ್ವರ್ ಕಟೀಲ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ , ರೂಪ ಡಿ ಬಂಗೇರ,ಸುರೇಂದ್ರ ಜೆ ,ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್,ಜಿಲ್ಲಾ ರೈತ ಮೋರ್ಚಾದ ವಿಜಯ್ ಶೆಣೈ, ಮಂಡಲದ ಉಪಾಧ್ಯಕ್ಷರು ಹಾಗೂ ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಅಜಯ್ ಕುಲಶೇಖರ, ದೀಪಕ್ ಪೈ,ರಮೇಶ್ ಹೆಗ್ಡೆ, ಕಿರಣ್ ರೈ, ಮಂಡಲದ ಕೋಶಾಧಿಕಾರಿ ಶ್ರೀನಿವಾಸ್ ಶೇಟ್, ಮ ನ ಪಾ ಸ್ಥಾಯಿ ಸಮಿತಿ ಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪೂರ್ಣಿಮಾ, ಮನಪಾ ಸದಸ್ಯರಾದ ಶಕೀಲಾ ಕಾವ ,ಕಿಶೋರ್ ಕೊಟ್ಟಾರಿ ಮಂಡಲ ಕಾರ್ಯದರ್ಶಿ ಲಲ್ಲೇಶ್ ,ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್ ,ಅಲ್ಪ ಸಂಖ್ಯಾತರ ಮೋರ್ಚಾದ ಪೆಡ್ರಿಕ್ ಪೌಲ್,ಎಸ್.ಸಿ ಮೋರ್ಚಾದ ಅಧ್ಯಕ್ಷರಾದ ರಘುವೀರ್ ಬಾಬುಗುಡ್ದ ಹಾಗೂ ಮಂಡಲ ಸಾಮಾಜಿಕ ಜಾಲತಾಣದ ಅಶ್ವಿತ್ ಕೊಟ್ಟಾರಿ ಮಹಾ ಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ರಾಮಚಂದ್ರ ಚೌಟ ,ಪ್ರಶಾಂತ್ ಮರೋಳಿ ಕಾರ್ಯದರ್ಶಿ ರವಿಚಂದ್ರ ವಾರ್ಡ್ ಶಕ್ತಿಕೇಂದ್ರದ ಪ್ರಮುಖರಾದ ಗೋಪಾಲ್, ಯತೀಶ್, ವಾರ್ಡ್ ಸಾಮಾಜಿಕ ಜಾಲತಾಣದ ಸುಮಲತಾ ಹಾಗೂ ಪದವು ಪಶ್ಚಿಮ ವಾರ್ಡಿನ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು