ಬೆಳ್ತಂಗಡಿ : ನಾಳೆ ಬೆಳ್ತಂಗಡಿಯ ಬೆಳಾಲು ಆರಿಕೊಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪೂಜೆ, ಮೃತ್ಯುಂಜಯ ಹೋಮ ಹಾಗೂ ದುರ್ಗಾಪೂಜೆ ಸೇರಿದಂತೆ ವಾರ್ಷಿಕ ಉತ್ಸವ ಜರುಗಲಿದೆ.
ಹಾಗೆಯೇ ಪೂರ್ವಹ್ನದ ಸಮಯದಲ್ಲಿ ಕ್ಷೇತ್ರದಲ್ಲಿ ನಾಗತಂಬಿಲ, ಮೃತ್ಯುಂಜಯ ಹೋಮ, ಚಾಮುಂಡೇಶ್ವರಿ ದೇವಿಗೆ ಮಹಾಪೂಜೆ, ದುರ್ಗಾಪೂಜೆ ಸೇರಿದಂತೆ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದ್ದು, ತದನಂತರ ಅಪರಾಹ್ನ ಹಲವು ತಂಡಗಳಿಂದ ಭಜನಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಆ ಬಳಿಕ ರಾತ್ರಿ ವಾರ್ಷಿಕ ಉತ್ಸವ ಅತ್ಯಂತ ಭರ್ಜರಿಯಾಗಿ ನಡೆಯಲಿದ್ದು, ಈಗಾಗಲೇ ಉತ್ಸವಕ್ಕೆ ಬೇಕಾದಂತಹ ಸಕಲ ಸಿದ್ದತೆಗಳು ಅಡಚಣೆಯಿಲ್ಲದೇ ನಡೆಯುತ್ತಿದೆ. ಇದರ ಪ್ರಯುಕ್ತವಾಗಿ 13ಕ್ಕೆ ಇರಿಸಲಾಗಿದ್ದ ಲಕ್ಕಿ ಡಿಪ್ ಡ್ರಾ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದ್ದು, 13ಕ್ಕೆ ಯಾವುದೇ ಕಾರ್ಯಕ್ರಮ ಇಲ್ಲದಿರುವುದರಿಂದ ಲಕ್ಕಿ ಡಿಪ್ ಡ್ರಾ ವನ್ನು 14 ರಂದು ನಡೆಸುವುದಾಗಿ ತಿಳಿಸಿದೆ. ಅಲ್ಲದೇ ಇದಕ್ಕೆ ಭಕ್ತವೃಂದವು ಸಂಪೂರ್ಣ ಸಹಕಾರ ನೀಡಬೇಕೆಂದು ಧರ್ಮದರ್ಶಿಗಳು ಹಾಗೂ ಆಡಳಿತ ಮಂಡಳಿ ವಿನಂತಿಸಿಕೊಂಡಿದ್ದಾರೆ.