Saturday, November 23, 2024
ಬೆಂಗಳೂರು

ಸರ್ಕಾರದ ಘೋಷನೆಯಲ್ಲಿದ್ದು ಜಾರಿಯಾಗದ ಯೋಜನೆ, ಕೇಂದ್ರದ ವಿರುದ್ಧ ಕಿಡಿಕಾರಿದ ದಿನೇಶ್ ಗುಂಡೂರಾವ್-ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸುಳ್ಳು ಘೋಷನೆಯ ಯೋಜನೆಯನ್ನು ತರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ವರಿಷ್ಠ ದಿನೇಶ್ ಗುಂಡೂರಾವ್. ಮಾರ್ಚ್ 30 ರಂದು ಕೊರೊನಾ ಯೋಧರಿಗಾಗಿ 50 ಲಕ್ಷ ಮೊತ್ತದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿತ್ತು, ಆದರೆ ಪರಿಷ್ಕøತ ಸುತ್ತೋಲೆ ಹೊರಡಿಸಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತರ ಕುಟುಂಬಕ್ಕೆ ಮಾತ್ರ ಗರೀಬ್ ಕಲ್ಯಾಣ್ ವಿಮೆ ದೊರೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತರ ಸಿಬ್ಬಂದಿಗಳು ಸತ್ತರೆ ರಾಜ್ಯ ಸರ್ಕಾರ ವಿಮೆ ಮೊತ್ತ ನೀಡಬೇಕು ಎಂದು ಹೇಳಿತ್ತು. ಆದರೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಕೊರೊನಾ ವಾರಿಯರ್ಸ್‍ಗಳಿಗೆ ಒಂಬತ್ತು ತಿಂಗಳು ಕಳೆದರೂ ವಿಮೆ ಹಣ ಲಭಿಸಿಲ್ಲ. ‘ಮೃತ ಕೊರೋನಾ ವಾರಿಯರ್ಸ್‍ಗೆ ವಿಮೆ ನೀಡುವ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವಹಿಸಿ ಕೇಂದ್ರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಇತ್ತ ರಾಜ್ಯ ಸರ್ಕಾರವೂ ವಿಮೆ ಪಾವತಿಸಲು ನೂರಾರು ನೆಪ ಹುಡುಕುತ್ತಿದೆ. ಹಾಗಾದರೆ ಈ ಎರಡು ಸರ್ಕಾರಗಳ ದೃಷ್ಟಿಯಲ್ಲಿ ಕೋವಿಡ್ ರೋಗದ ವಿರುದ್ಧ ಹೋರಾಡಿ ಮೃತರಾದ ವಾರಿಯರ್ಸ್ ಜೀವಗಳಿಗೆ ಬೆಲೆಯೇ ಇಲ್ಲವೆ?” ಎಂದು ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ದ ಕಿಡಿಕಾರಿದ್ದಾರೆ. ಕೇಂದ್ರ ಇಂತಹ ಸುಳ್ಳು ಘೋಷಣೆಯ ಯೋಜನೆ ತರುವುದು ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದ್ದಾರೆ.