Saturday, November 23, 2024
ಪುತ್ತೂರು

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕು ಮೂಡಿಸುತ್ತಿರುವ ಪ್ರಗತಿ ಎಜುಕೇಷನಲ್ ಫೌಂಡೇಷನ್; ಪ್ರಗತಿಯಲ್ಲಿ ವಿದ್ಯಾವಿನ್-ಕಹಳೆ ನ್ಯೂಸ್

ಪುತ್ತೂರು : ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕು ಮೂಡಿಸುತ್ತಿರುವ ಪ್ರಗತಿ ಎಜುಕೇಷನಲ್ ಫೌಂಡೇಷನ್ ನ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ನ ವಿದ್ಯಾರ್ಥಿಗಳ ಪ್ರಗತಿಗೆ ವಿದ್ಯಾವಿನ್ ಜೊತೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ವಿದ್ಯಾವಿನ್’ ತಂಡದ ಅನುಭವಿ ಶಿಕ್ಷಕರಿಂದ ರೂಪಿಸಿರುವ ಆ್ಯಪ್ ನಲ್ಲಿ 10ನೇ ತರಗತಿಯ ಮೂರು ಪ್ರಮುಖ ವಿಷಯಗಳು ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ, ಜತೆಗೆ ದ್ವಿತೀಯ ಭಾಷೆ ಇಂಗ್ಲೀಷ್ ಪಾಠ, ವ್ಯಾಕರಣವೂ ಇದೆ. 100 ಗಂಟೆಗೂ ಅಧಿಕ ವಿಡಿಯೊ ತರಗತಿಗಳ ಪ್ರಸ್ತುತಿ, 1 ಸಾವಿರಕ್ಕೂ ಅಧಿಕ ಅಧ್ಯಾಯ ಘಟಕಗಳ ವಿಡಿಯೊ ತರಗತಿಗಳು, ತ್ವರಿತ ಮತ್ತು ಪರಿಣಾಮಕಾರಿ ಅಧ್ಯಾಯವಾರು ಪುನರ್ಮನನ, ಜೀವಂತ ವೈಜ್ಞಾನಿಕ ಪ್ರಯೋಗಗಳು, ರೇಖಾಚಿತ್ರಗಳು ಮತ್ತು ವೈಜ್ಞಾನಿಕ ಚಿತ್ರಗಳ ಸರಳೀಕೃತ ವಿಡಿಯೊ ಚಿತ್ರಣಗಳು, ಸ್ವ ಮೌಲ್ಯಮಾಪನ ಜತೆಗೆ ಸಂವಾದ ಮಾದರಿಯ ಬಹು ಆಯ್ಕೆ ಪ್ರಶ್ನೆಗಳು, ವೆಬಿನಾರ್ ಮತ್ತು ಫೋನ್ ಇನ್ ಮೂಲಕ ವಿಶೇಷ ಮುತುವರ್ಜಿಯ ಮಾನಿಟರಿಂಗ್ (ಮೆಂಟರಿಂಗ್), ಪ್ರತ್ಯೇಕ ಕಾಲ್ ಸೆಂಟರ್ ಈ ಆ್ಯಪ್ ನ ವಿಶೇಷತೆಗಳು. ಕ್ಷಣ ಕ್ಷೇತ್ರದ ಮೇಲೆ ಕೋವಿಡ್ 19ನ ಕರಾಳ ಛಾಯೆ ಆವರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದೇಷ್ಟೋ ಸಂಕಷ್ಟ ಅನುಭವಿಸುತ್ತಿದ್ದರೆ, ಪೋಷಕರು ಆತಂಕದಿಂದ ಕೂಡಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ‘ವಿದ್ಯಾವಿನ್’ ತಂಡ ಎಜುಕೇಷನ್ ಆ್ಯಪ್ ರೂಪಿಸಿ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದು. ಶಿಕ್ಷಕರು, ಪೋಷಕರು ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿ ಎಂದು ಗೋಕುಲ್ ನಾಥ್ ಪಿ.ವಿ., ಸ್ಥಾಪಕ ಅಧ್ಯಕ್ಷರು, ಪ್ರಗತಿ ಎಜುಕೇಷನಲ್ ಫೌಂಡೇಷನ್ ಇವರು ಶುಭಹಾರೈಸಿದ್ದಾರೆ.