Sunday, January 19, 2025
ವಾಣಿಜ್ಯ

6, 7, 8ನೇ ತರಗತಿ ವಿದ್ಯಾರ್ಥಿಗಳಿಗೆ “ ANSWER -2018 ” ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಎಪ್ರಿಲ್ 12ರಿಂದ ತರಗತಿಗಳು ಆರಂಭ – ಕಹಳೆ ನ್ಯೂಸ್

ಪುತ್ತೂರು : ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಪ್ರಗತಿ ಎಜ್ಯುಕೇಶನಲ್ ಫೌಂಢೇಶನ್(ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಪ್ರಗತಿಯ ವಿನೂತನ ಪರಿಕಲ್ಪನೆಯಾದ ದ್ವಿತೀಯ ವರುಷದ ANSWER 2018 ಏಪ್ರಿಲ್ 12 ಗುರುವಾರದಂದು ಪ್ರಾರಂಭಗೊಳ್ಳಲಿದೆ.


ಈ ನಿಟ್ಟಿನಲ್ಲಿ ಸಂಸ್ಥೆಯ ಸಂಚಾಲಕರಾದ ಪಿ.ವಿ.ಗೋಕುಲ್‍ನಾಥ್‍ರವರು ಮಾತನಾಡುತ್ತಾ We give children the key to device, construct and live their own future. “ಶಿಕ್ಷಣ ಎಂಬುದು ನಿಂತ ನೀರಲ್ಲ”. ಈ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗಳು ಆಗುತ್ತಿರುತ್ತವೆ. ಕಲಿಕೆಯ ವಿಷಯ ಬೋಧನಾ ವಿಧಾನಗಳಲ್ಲಿ ಆಧುನಿಕ ಶೈಲಿಯನ್ನು, ನೂತನ ಕ್ರಮಗಳನ್ನು ಅಳವಡಿಸಲಾಗುತ್ತಿದೆ. ಈ ರೀತಿ ನಿರಂತರವಾಗಿ ಹಲವು ಪ್ರಯೋಗಗಳಿಗೆ ಒಳಪಡುತ್ತಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಇದು ವಿದ್ಯಾರ್ಥಿಗಳ ಪಾಲಿಗೆ ಕೆಡುಕಾಗಿ ಪರಿಣಮಿಸುತ್ತಿದೆ. ಇಂದಿನ ಶಿಕ್ಷಣ ನೀತಿಯ ಪ್ರಕಾರ ಒಂದರಿಂದ ಒಂಭತ್ತನೆಯ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಉತ್ತೀರ್ಣಗೊಳಿಸಬೇಕು. ಅಂದರೆ, ವಿದ್ಯಾರ್ಥಿಯು ತಾನು ಕಲಿಯುತ್ತಿರುವ ವಿಷಯಗಳ ಬಗ್ಗೆ ಕನಿಷ್ಟ ಜ್ಞಾನವನ್ನು (35% ಅಂಕಗಳನ್ನು ಗಳಿಸುವ ಸಾಮಥ್ರ್ಯ) ಹೊಂದಿಲ್ಲದಿದ್ದರೂ ಮುಂದಿನ ತರಗತಿಗೆ ತೇರ್ಗಡೆಗೊಳ್ಳುವ ಅವಕಾಶವಿದೆ. ಈ ರೀತಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ ಗಣಿತದ ಮೂಲಭೂತ ಕ್ರಿಯೆಗಳಿರಬಹುದು ಅಥವಾ ವಿಜ್ಞಾನ, ಇಂಗ್ಲಿಷ್ ಇನ್ನಿತರ ಎಲ್ಲಾ ವಿಷಯಗಳ ಮೂಲಭೂತ(basic) ಅಂಶಗಳ ಪರಿಜ್ಞಾನವೇ ಇರುವುದಿಲ್ಲ. ಹಿಂದಿನ ತರಗತಿಗಳಲ್ಲಿ ಏನನ್ನು ಅಧ್ಯಯನ ಮಾಡುತ್ತಾರೋ ಅದರ ಮುಂದುವರಿದ ಭಾಗವೇ ಮುಂದಿನ ತರಗತಿಯಲ್ಲಿ ಅಭ್ಯಸಿಸಬೇಕಾಗಿರುವುದು. ತಳಪಾಯವೇ ಸಡಿಲಗೊಂಡರೆ ಮುಂದಿನ ತರಗತಿಗಳ ಪಠ್ಯ ಖಂಡಿತವಾಗಿಯೂ ಅರ್ಥವಾಗುವುದಿಲ್ಲ. ಪರಿಣಾಮವಾಗಿ ಹತ್ತನೇ ತರಗತಿಯಲ್ಲಿ ಅನುತ್ತೀರ್ಣಗೊಳ್ಳುವ ಅಥವಾ ಭವಿಷ್ಯದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವ ಸಂಭವವಿರುತ್ತದೆ. ಜೊತೆಗೆ ಹಲವು ವಿದ್ಯಾರ್ಥಿಗಳಲ್ಲಿರುವ ಇನ್ನೊಂದು ನ್ಯೂನತೆ ಎಂದರೆ ಪರಿಮಿತಿಯನ್ನಿಟ್ಟುಕೊಂಡು ಕಲಿಯುವುದು. “ಎಲ್ಲವೂ ಪರೀಕ್ಷೆ ಮುಗಿಯುವ ತನಕ” ಎಂಬ ಉಡಾಫೆ. ಪರೀಕ್ಷೆಯ ಮರುದಿನಕ್ಕೆ ಹಿಂದೆ ಕಲಿತ ಒಂದು ವಿಷಯದ ಬಗ್ಗೆಯೂ ನೆನಪಿಲ್ಲ, ಜ್ಞಾನವಿಲ್ಲ. ಇದು ದುರಂತ! ಏನನ್ನು ಓದುತ್ತೇವೆಯೋ ಕಲಿಯುತ್ತೇವೆಯೊ ಅದಕ್ಕೆ ಯಾವುದೇ ಮಿತಿಗಳಿರಬಾರದು. ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಹಾಗೂ ಹಂಬಲವಿರಬೇಕು. ಆಸಕ್ತಿಯಿಂದ ಯಾವ ವಿಷಯವನ್ನು ಓದುತ್ತೇವೆಯೋ ಅದು ಜೀವನ ಪರ್ಯಂತ ಅಚ್ಚಳಿಯದಂತೆ ನೆನಪುಳಿಯುತ್ತದೆ. ತಾರ್ಕಿಕ ಗುಣ ಹಾಗೂ ಪ್ರಶ್ನಿಸುವ ಸ್ವಭಾವ ವಿದ್ಯಾರ್ಥಿಗಳಲ್ಲಿದ್ದರೆ ಒಳಿತು. ಇದರಿಂದ ಅವರ ಜ್ಞಾನ ವಿಸ್ತಾರಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾದರೆ ವಿದ್ಯಾರ್ಥಿಗಳಲ್ಲಿ ಇಂತಹ ಗುಣಗಳನ್ನು ಹೆಚ್ಚಿಸುವುದು ಹೇಗೆ? ಅವರಲ್ಲಿ ಶಿಕ್ಷಣದ ತಳಪಾಯ ಭದ್ರಪಡಿಸುವುದೆಂತು? ಇವುಗಳಿಗೆಲ್ಲಾ ಪರಿಹಾರವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ‘ಉತ್ತರ’ದೊಂದಿಗೆ ನಿಂತಿದೆ ಪ್ರಗತಿ ಸ್ಟಡಿಸೆಂಟರ್. ಪುತ್ತೂರಿನಲ್ಲಿ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ. ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯವನ್ನು ಪುನರ್ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಪುತ್ತೂರಿನ ಹಲವು ಪ್ರಥಮಗಳಿಗೆ ಭಾಜನವಾಗಿರುವ ನಮ್ಮ ವಿದ್ಯಾಸಂಸ್ಥೆ ಇದೀಗ ಮತ್ತೊಂದು ನೂತನ ಮೈಲಿಗಲ್ಲನ್ನು ಸ್ಥಾಪಿಸುವ ಸಿದ್ಧತೆಯಲ್ಲಿದೆ. 6 ರಿಂದ 9ನೇ ತರಗತಿಯ( 5ರಿಂದ 6ನೇ, 6 ರಿಂದ 7ನೇ, 7ರಿಂದ 8ನೇ ಹಾಗೂ 8ರಿಂದ 9ನೇ ತರಗತಿಗಳಿಗೆ ಉತ್ತೀರ್ಣರಾದ) ವಿದ್ಯಾರ್ಥಿಗಳಿಗಾಗಿ ಬೇಸಿಗೆ ರಜೆಯನ್ನು ಸದ್ಭಳಕೆ ಮಾಡಿಕೊಳ್ಳುವ ಸಲುವಾಗಿ Answer ಎಂಬ ಹೆಸರಿನೊಂದಿಗೆ ವಿಶಿಷ್ಟ ರೀತಿಯಲ್ಲಿ Basic Science, Basic Maths and Basic English ತರಗತಿಗಳನ್ನು ಹಮ್ಮಿಕೊಳ್ಳುತ್ತಿದೆ. ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿಗಳೊಂದಿಗಿನ ಒಡನಾಟವು ಅವರ ನ್ಯೂನತೆಗಳನ್ನು ಗುರುತಿಸಲು ಸಹಕಾರಿಯಾಯಿತು. ತನ್ನ ಈ ಅನುಭವವನ್ನು ಬಳಸಿಕೊಂಡು ಇದುವರೆಗೆ ಪುತ್ತೂರು ಹಾಗು ಆಸುಪಾಸಿನಲ್ಲಿ ಯಾರೂ ಹಮ್ಮಿಕೊಂಡಿರದ ವಿನೂತನ ಬೇಸಿಗೆ ಶಿಬಿರ “Answer”ನ್ನು ಕಳೆದ ವರುಷ ಪ್ರಾರಂಭಿಸಿದ್ದೇವೆ ಎಂದರು.

ಏನಿದು Answer?
ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ವಿಶಿಷ್ಟವಾದ ಪ್ರಯೋಗ. ಇಂದು ಹಲವು ವಿದ್ಯಾರ್ಥಿಗಳಿಗೆ ಗಣಿತದ ಮೂಲ ಕ್ರಿಯೆಗಳಾದ ಕೂಡುವುದು, ಕಳೆಯುವುದರಿಂದ ತೊಡಗಿ ವಿಜ್ಞಾನ ಹಾಗೂ ಇಂಗ್ಲೀಷ್‍ನ ಸಾಮಾನ್ಯ ಅರಿವೂ ಇರುವುದಿಲ್ಲ. ಇಷ್ಟನ್ನೂ ತಿಳಿಯದ ವಿದ್ಯಾರ್ಥಿಗಳು ಮುಂದಿನ ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳಲಾಗದೇ ಒದ್ದಾಡುತ್ತಾರೆ. ಈ ಬೇಸಿಕ್ ವಿಷಯಗಳನ್ನು ತಿಳಿದ ವಿದ್ಯಾರ್ಥಿಗಳಲ್ಲಿ ಹಲವರಿಗೆ ವೇಗವಾಗಿ ಕ್ರಿಯೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಈಗಾಗಲೇ 7, 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಲವು ವಿಷಯಗಳಿಂದ ವಂಚಿತರಾಗಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗಿರುವ ಇನ್ನೊಂದು ಸಮಸ್ಯೆ ಎಂದರೆ ಗಣಿತದ ಹಲವು ಸಮಸ್ಯೆಗಳನ್ನು ಬಿಡಿಸಲು ಸುಲಭಮಾರ್ಗ(Shortcut method) ತಿಳಿದಿರುವುದಿಲ್ಲ. ಪ್ರತಿಯೊಂದನ್ನೂ ದೀರ್ಘವಾಗಿ ಮಾಡುತ್ತಾ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಇನ್ನು ಇಂಗ್ಲೀಷ್‍ನ ವಿಚಾರಕ್ಕೆ ಬಂದರೆ ನಮಗೆ ತಿಳಿಯದ ಅದೆಷ್ಟೋ ವಿಚಾರಗಳು ಇವೆ. ಓವೆಲ್ ಎಂದರೇನು? ಅದರ ವಿಶೇಷತೆ ಏನು? ಆಕ್ಸ್‍ಫರ್ಡ್ ಶಬ್ಧಕೋಶ ಹೀಗೆ ಹೇಳುತ್ತದೆ, ಗಿoತಿeಟ.Vowel.  A speech sound in which the mouth is open and the tongue is not touching the top of the mouth, the teeth or the lips, and the letter representing such a sound, such as a,e,i,o,u. ಇಂತಹ ಬೇಸಿಕ್ ವಿಚಾರಗಳನ್ನು ತಿಳಿದುಕೊಳ್ಳುವುದು, ಶಬ್ಧಕೋಶವನ್ನು ಬಳಸುವುದು ಹೇಗೆ ಮುಂತಾದವುಗಳನ್ನು ಕಲಿತುಕೊಳ್ಳುವುದು ಅತೀ ಅವಶ್ಯಕ. ಇನ್ನು ವಿಜ್ಞಾನ ವಿಭಾಗದಲ್ಲಿ, ಜೀವ ಕೋಶ ಎಂದರೇನು? ಅದರೊಳಗೆ ಏನೇನಿದೆ? ಎಂಬ ವಿಚಾರ ತಿಳಿಯದೇ ಜೀವಿಗಳ ಬಗ್ಗೆ, ಅಥವಾ ಜೀವನ ಕ್ರಿಯೆ ಹೇಗೆ ನಡೆಯುತ್ತದೆ? ಮುಂತಾದವುಗಳನ್ನು ಹೇಳಿದರೆ ತಿಳಿಯದು. ಕಾಬರ್ನ್‍ನ್ನು ‘ಅ’ ಎಂದು, ನೀರನ್ನು ಊ2ಔ ಎಂದು, ಸಾರಜನಕ ‘ಓ’ ಎಂದು ಸಂಕೇತಗಳಲ್ಲಿ ಬರೆಯಲಾಗುತ್ತದೆ, ಎಂದು ತಿಳಿಯದ ವಿದ್ಯಾರ್ಥಿಗಳಿಗೆ 2ಊ+1/2ಔ2ಊ2ಔ ಎಂಬ ಸಮೀಕರಣ ಬರೆದರೆ ಅರ್ಥವಾಗಬಹುದೇ? ಬೆಳಕಿನ ವೇಗ ಸೆಕುಂಡಿಗೆ 3ಘಿ108 ಎಂದು ತಿಳಿಯದಿದ್ದರೆ ಭೌತಶಾಸ್ತ್ರದ ಉಳಿದ ಸಮಸ್ಯೆಗಳನ್ನು ಬಿಡಿಸಲು ಕಷ್ಟವಾಗುತ್ತದೆ. ಇದರಿಂದ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಅವರಿಗೆ ಈ ವಿಚಾರಗಳನ್ನು ಬೋಧಿಸಬೇಕಾಗಿರುವ ಅಧ್ಯಾಪಕರಿಗೂ ಇದು ಸಂಕೀರ್ಣವಾಗುತ್ತದೆ. ಇಂತಹ ಹತ್ತು ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಯಾವುದು ವಿದ್ಯಾರ್ಥಿಗಳಿಗೆ ಅಗತ್ಯ ಎಂಬುದನ್ನು ಗಮನಿಸಿ ನಮ್ಮದೇ ಆದ ‘Smart class ’ ಮಾಡಿರುತ್ತೇವೆ. ಜೊತೆಗೆ ಈ ವಿಚಾರಗಳನ್ನು Team work ಗಳ ಮೂಲಕ ಖಿeಚಿm ತಿoಡಿಞ ಮಾಡಿಸುವುದರ ಮೂಲಕ ಮಾಮೂಲು ತರಗತಿಗಳಂತಲ್ಲದೇ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಬೇಕು, ತರಗತಿಯನ್ನು ಆಸ್ವಾದಿಸಬೇಕು ಎಂಬ ಗುರಿಯನ್ನಿಟ್ಟುಕೊಂಡಿರುತ್ತೇವೆ. ಈ ತರಗತಿಯಿಂದ ವಿದ್ಯಾರ್ಥಿಗಳು ತಮ್ಮ ಸೃಜನ ಶೀಲತೆಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿಗೊಳ್ಳುತ್ತಾರೆ ಎಂಬ ಭರವಸೆ ನಮ್ಮದು. ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳು ಮೂಡುವಂತೆ ಮಾಡಿ ಅದಕ್ಕೆ ಉತ್ತರ ನೀಡುವ ಆಶಯವೇ ‘ANSWER’ summer classes.

ಈ ವಿನೂತನ ತರಗತಿಯು ಕಳೆದ ವರುಷ ಪುತ್ತೂರಿನಲ್ಲಿ ್ಲ ಪ್ರಪ್ರಥಮ ಬಾರಿಗೆ ಪ್ರಗತಿ ಸ್ಟಡಿ ಸೆಂಟರ್ ಆಯೋಜಿಸಿದ್ದು, ಗಣಿತ, ವಿಜ್ಷಾನ ಹಾಗೂ ಇಂಗ್ಲೀಷ್ ವಿಷಯಗಳ ಬಗ್ಗೆ ಎಪ್ರಿಲ್ 12ರಿಂದ ಮೇ 21ರವರೆಗೆ ಪ್ರತಿನಿತ್ಯ ಬೆಳಗ್ಗೆ 9:30 ಗಂಟೆಯಿಂದ ಸಂಜೆ 3:30 ಗಂಟೆಯವರೆಗೆ ನಡೆಯಲಿದೆ. ದೂರದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಂಸ್ಥೆಯಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ಈ ಕೂಡಲೇ ದೂರವಾಣಿ ಅಥವಾ ನೇರವಾಗಿ ನೋಂದಾವಣಿ ಮಾಡಿಕೊಳ್ಳಬೇಕಾಗಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಕೆ ಹೇಮಲತಾ ಗೋಕುಲ್‍ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.