Monday, January 20, 2025
ಪುತ್ತೂರು

ಸರ್ಕಾರಿ ಸಂಸ್ಥೆಯು ದೇವಾಸ್ಥಾನವಿದಂತೆ; ಜಯರಾಮ ಪುರುಷ-ಕಹಳೆ ನ್ಯೂಸ್

ಪುತ್ತೂರು : ಸರ್ಕಾರಿ ಸಂಸ್ಥೆಯು ದೇವಾಸ್ಥಾನವಿದಂತೆ, ನಾವು ಪ್ರಾಮಾಣಿಕವಾಗಿ ದುಡಿದರೆ ಅದೇ ನಮ್ಮನ್ನು ದಾರಿ ದೀಪವಾಗಿ ಕಾಯುತ್ತದೆ. ನಮಗೆ ನಾವು ಮಾಡುವ ಕೆಲಸದಲ್ಲಿ ಉತ್ಸಾಹ ಇದ್ದರೆ ಯಾವುದೇ ಉದ್ಯೋಗವು ಕಷ್ಟವಲ್ಲ ಎಂದು ನಿವೃತ ಕೆ.ಎಸ್.ಅರ್.ಟಿ.ಸಿ. ಬಸ್ ಚಾಲಕ ಜಯರಾಮ ಪುರುಷ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ‘ಜನಮನ’ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿ ಅವರು ಗುರುವಾರ ಮಾತನಾಡಿದರು. ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನಾಗಬೇಕಾದರೆ ಅದರದೇ ಆದ ತರಬೇತಿಗಳು ಇವೇ, ಈ ವೃತ್ತಿಯ ನೌಕರನಿಗೆ ಅನೇಕ ರೀತಿಯ ಸೌಲಭ್ಯಗಳು ಲಭ್ಯವಿದೆ. ಅದೇ ರೀತಿಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ತೊಂದರೆಯಾದಲ್ಲಿ ಅಂತಹುದೇ ಸವಲತ್ತುಗಳನ್ನು ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸುಶ್ಮಿತಾ ಜಯಾನಂದ್ ಮಾತನಾಡಿ, ನಮಗೆ ತಿಳಿಯದೇ ಇರುವ ವ್ಯಕ್ತಿಗಳಲ್ಲಿ ಅದೆಷ್ಟೂ ಅನುಭವದ ಕಥೆಗಳಿವೆ, ಇದೆಲ್ಲ ನಮ್ಮ ಜೀವನಕ್ಕೆ ಸ್ಪೂರ್ತಿಯಾಗಬೇಕು ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಕ್ಷತ್ ಭಟ್ ಮತ್ತು ಉಪನ್ಯಾಸಕಿ ಸೀಮಾ ಪೋನಡ್ಕ ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕಿ ಪ್ರಜ್ಞಾ ಬಾರ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿ ಶಿಶಿರ್ ವಂದಿಸಿ, ವಿದ್ಯಾರ್ಥಿನಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.