Sunday, November 24, 2024
ಪುತ್ತೂರು

ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಬಾಗದಿಂದ ಬಜೆಟ್-2021 ಕಾರ್ಯಕ್ರಮ, ಬಜೆಟ್ ಅನ್ನುವುದೊಂದು ಕಲಿಕಾ ಅಂಶ; ಡಾ. ಶ್ರೀಪತಿ ಕಲ್ಲೂರಾಯ-ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿ ಜೀವನದಲ್ಲಿ ತಿಳಿದುಕೊಳ್ಳುವ ಸಾಮಾನ್ಯ ಜ್ಞಾನಗಳು ಭವಿಷ್ಯಕ್ಕೆ ದಾರಿದೀಪವಾಗುತ್ತವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಲ್ಲೇ ಜಗತ್ತಿನ ಆಗುಹೋಗುಗಳನ್ನು ಅರ್ಥೈಸಿಕೊಳ್ಳುವವರಾಗಬೇಕು ಎಂದು ಯಕ್ಷಗಾನ ಕಲಿಕಾ ಕೇಂದ್ರ ಮತ್ತು ವಿವೇಕಾನಂದ ಕಲಿಕಾ ಕೇಂದ್ರ ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ, ಅರ್ಥಶಾಸ್ತ್ರ ಉಪನ್ಯಾಸಕ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಬಜೆಟ್-2021’ ಸೆಮಿನಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು. ಬಜೆಟ್ ಅನ್ನುವುದೊಂದು ಕಲಿಕಾ ಅಂಶ. ಈ ಬಗ್ಗೆ ಕೇವಲ ಪುಸ್ತಕದಲ್ಲಿ ಓದುವುದರ ಬದಲಾಗಿ ಸಾಮಾಜಿಕವಾಗಿಯೂ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಬಜೆಟ್ ವಿಚಾರವನ್ನು ರಾಜಕೀಯವಾಗಿ ನೋಡದೆ ಶೈಕ್ಷಣಿಕ ಹಾಗೂ ಆರ್ಥಿಕ ನೆಲೆಗಟ್ಟಿನಿಂದ ಗಮನಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ಬಜೆಟ್ ರೂಪುರೇಷೆಯನ್ನು ತಿಳಿದುಕೊಳ್ಳಬೇಕಾಗಿರುವುದು ಇವತ್ತಿನ ವಿದ್ಯಮಾನಕ್ಕೆ ಅತೀಅಗತ್ಯ. ಹೀಗಾಗಿ ವಿದ್ಯಾರ್ಥಿಗಳು ಇಂತಹ ಸಂಶೋಧನಾತ್ಮಕ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ದ್ವಿತೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಸವಿತಾ, ಆಶಿತಾ, ವೈಷ್ಣವಿ, ಮಹಿಮಾ, ದೀಕ್ಷಾ, ಚಂದನ್, ಸಚಿನ್ ಹೊಳ್ಳ ‘ಬಜೆಟ್ -2021’ ವಿಷಯದ ಮೇಲೆ ತಮ್ಮ ವಿಚಾರ ಮಂಡಿಸಿದರು. ಡಾ. ಶ್ರೀಪತಿ ಕಲ್ಲುರಾಯ ಅವರು ವಿದ್ಯಾರ್ಥಿಗಳಿಗೆ ಬಜೆಟ್ ಕುರಿತಂತೆ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟರು. ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಬಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿ ವೀಣಾ ಶಾರದಾ ವಂದನಾರ್ಪಣೆಗೈದು, ರಮಿತಾ ಕಾರ್ಯಕ್ರಮ ನಿರೂಪಿಸಿದರು.