Tuesday, January 21, 2025
ಸುದ್ದಿ

ಇಂದು ನಾಡಿನಾದ್ಯಂತ ತೆರೆ ಕಾಣಲಿದೆ ಕನಸು ಮಾರಾಟಕ್ಕಿದೆ ಸಿನಿಮಾ-ಕಹಳೆ ನ್ಯೂಸ್

ಮಂಗಳೂರು : ಇಂದು ನಾಡಿನಾದ್ಯಂತ ಯುವ ಮನಸ್ಸುಗಳ ಹೃದಯ ಕದ್ದ ಬಹುನಿರೀಕ್ಷಿತ ಕನಸು ಮಾರಾಟಕ್ಕಿದೆ ಸಿನಿಮಾ ತೆರೆ ಕಾಣಲಿದೆ. ಸ್ಮಿತೇಶ್ ಎಸ್ ಬಾರ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಕರಾವಳಿ ಪ್ರತಿಭೆಗಳ ಬಹು ನಿರೀಕ್ಷಿತ ಈ ಸಿನೆಮಾ , ಸಿನಿ ಪ್ರಿಯರಲ್ಲಿ ಹರುಷವನ್ನುಂಟು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕರಾವಳಿಯ ಯುವ ಜನತೆಯ ನೆಚ್ಚಿನ ಪುಂಡಿಯು ಈ ಸಿನಿಮಾದಲ್ಲಿ ಹಾಡಿನ ರೂಪದಲ್ಲಿ ಬಂದಿರುವುದು ಹಲವು ಯುವ ಮನಸ್ಸುಗಳಿಗೆ ಕಚಗುಳಿಯಿಡುತ್ತಿದ್ದು, ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸುವ ಈ ಸಿನಿಮಾವು ಸದ್ಯ ನಾಡಿನಾದ್ಯಂತ ಸದ್ದು ಮಾಡುತ್ತಿದೆ. ಹಾಗೂ ಈ ಸಿನಿಮಾಕ್ಕೆ ನವೀನ್ ಜಿ ಪೂಜಾರಿ ಕಥೆ ಬರೆದಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ಸಹ ನಿರ್ದೇಶಕರಾಗಿರುವುದರ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮಾನಸಹೊಳ್ಳರವರ ಸಂಗೀತ ನಿರ್ದೇಶನವಿದ್ದು, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾಣಿ ಹರಿಕೃಷ್ಣ, ಶ್ರೀ ಹರ್ಷ, ಸೇರಿದಂತೆ ಹಲವಾರು ದಿಗ್ಗಜರು ಈ ಸಿನಿಮಾದ ಸುಮಧುರ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅಲ್ಲದೇ ಈ ಸಿನೆಮಾದಲ್ಲಿ ಕರಾವಳಿಯ ವೈರಲ್ ಸ್ಟಾರ್ ವಾಸು ಮಲ್ಪೆಯವರೂ ನಟಿಸಿರುವುದು ಸಿನಿಮಾದ ಮತ್ತೊಂದು ವಿಶೇಷವಾಗಿದ್ದು, ಸಂಪೂರ್ಣವಾಗಿ ಹೊಸ ಮುಖಗಳನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಹೊಸತನದೊಂದಿಗೆ ಸಿನಿ ಪ್ರಿಯರ ನಿರೀಕ್ಷೆ ಹೆಚ್ಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು