Wednesday, January 22, 2025
ಕಡಬ

ಕಡಬದಲ್ಲಿ ಚಿರತೆ ದಾಳಿ ; ಇಬ್ಬರಿಗೆ ಗಾಯ-ಕಹಳೆ ನ್ಯೂಸ್

ಕಡಬ : ಇಂದು ನಸುಕಿನ ಜಾವ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಚಿರತೆಯೊಂದು ಜನರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 1.30 ಕ್ಕೆ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ಗಾಯಗೊಂಡವರನ್ನು ಶೇಖರ್ ಕಾಮತ್ ಮತ್ತು ಸೌಮ್ಯ ಕಾಮತ್ ಎಂದು ಗುರುತಿಸಲಾಗಿದೆ. ಇವರು ರಾತ್ರಿ ವೇಳೆ ಅಡಿಕೆ ತೋಟದಲ್ಲಿ ನೀರಿನ ಜಟ್ ಚೆಂಜ್ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ದಿನಗಳಲ್ಲಿ ಬಿಳಿನೆಲೆ ಗ್ರಾಮದಿಂದ ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ತಪ್ಪಿಸಿಕೊಂಡ ಚಿರತೆ ಇದು ಎನ್ನಲಾಗಿದ್ದು, ಚಿರತೆಯು ದಾಳಿ ನಡೆಸಿದ ತೋಟದಲ್ಲೇ ಇದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು