Wednesday, January 22, 2025
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಮನೆಯಲ್ಲಿದ್ದ ಮಗು ಏಕಾಏಕಿ ನಾಪತ್ತೆ ; ಹುಡುಕಿದಾಗ ಹತ್ತಿರದ ಪ್ಲ್ಯಾಟ್‍ನಲ್ಲಿ ನಿದ್ರಿಸುತ್ತಿದ್ದ ಮಗು-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ ಮನೆಯ ಹತ್ತಿರ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಏಕಾಏಕಿ ನಾಪತ್ತೆಯಾಗಿದ್ದು, ಮನೆ ಮಂದಿಯೆಲ್ಲಾ ಭಯಬೀತರಾದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಪತ್ತೆಯಾಗಿದ್ದ ಮಗುವನ್ನು ಹಳೇ ಬಸ್ ನಿಲ್ದಾಣದ ವಸತಿ ಸಮುಚ್ಚದಲ್ಲಿ ಬಾಡಿಗೆಗಿರುವ ಅಶ್ರಫ್ ಪುತ್ರ ಇಹಾನ್ ಎಂದು ಗುರುತಿಸಲಾಗಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಪಕ್ಕದಲ್ಲೇ ಇರುವ ನಾಲ್ಕು ಮಾಳಿಗೆಯ ಇನ್ನೊಂದು ವಸತಿ ಸಮುಚ್ಚಯದ ತಾರಸಿಯ ಮೇಲೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಮಗು ಮಲಗಿ ನಿದ್ರಿಸುತ್ತಿರುವುದು ಪತ್ತೆಯಾಗಿದ್ದು, ಮಗುವು ವಸತಿ ಸುಮ್ಮುಚದ ಬಳಿ ಆಟವಾಡುತ್ತಿದ್ದು, ಸಂಜೆಯ ವೇಳೆಗೆ ಪೇಟೆ ಕಡೆಗೆ ಬಂದಾಗ ವ್ಯಾಪಾರಿಗಳು ಮನೆಗೆ ಮರಳುವಂತೆ ಸೂಚಿದ್ದರು, ಆದರೆ ಮಗುವಿಗೆ ಹಿಂದಿರುಗಿ ಮನೆಗೆ ಹೋಗಲು ದಾರಿ ತಿಳಿಯದೇ ಪಕ್ಕದಲ್ಲಿದ್ದ ವಸತಿ ಸಮುಚ್ಚಯವೊಂದರ ಮೇಲ್ಭಾಗಕ್ಕೆ ಹೋಗಿದ್ದು, ಈ ವೇಳೆ ಭಯ ಮತ್ತು ದಣಿವಿನಿಂದ ಅಲ್ಲೇ ನಿದ್ರೆಗೆ ಜಾರಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು