Saturday, January 25, 2025
ಪುತ್ತೂರು

ಕೋಟಿ-ಚೆನ್ನಯ್ಯರಿಗೆ ಮತ್ತು ಬಿಲ್ಲವರಿಗೆ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ, ಕ್ಷಮೆಯಾಚಿಸಿದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ-ಕಹಳೆ ನ್ಯೂಸ್

ಪುತ್ತೂರು : ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಕೋಟಿ-ಚೆನ್ನಯ್ಯರಿಗೆ ಮತ್ತು ಬಿಲ್ಲವರಿಗೆ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ, ನಾನು ಮಾತನಾಡಿದ್ದು ತಪ್ಪಾಗಿದೆ ಎಂಬುವುದು ನನಗೆ ಅರಿವಾಗಿದೆ. ತನ್ನ ತಪ್ಪನ್ನು ಮನ್ನಿಸುವಂತಹ ಅನುಗ್ರಹವನ್ನು ಕರುಣಿಸಬೇಕೆಂದು ಕ್ಷಮೆಯಾಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಡುಮಲೆಯಲ್ಲಿರುವ ಕೋಟಿ ಚೆನ್ನಯ್ಯರ ಮೂಲಕ್ಷೇತ್ರದಲ್ಲಿ ದೇಯಿ ಬೈದೆತಿ ಅವರ ಸಮಾಧಿ ಸ್ಥಳದಲ್ಲಿ ಕೈ ಕಾಣಿಕೆ ಒಪ್ಪಿಸಿ, ಕುವೆತೋಟದಲ್ಲಿ ಸುವರ್ಣಕೇದಗೆ ದೇಯಿ ಬೈದೆತಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ಹಾಗಾಗಿ ನಾನು ಪಡುಮಲೆಯ ಮೂಲಕ್ಷೇತ್ರಕ್ಕೆ ಬಂದು ಕ್ಷಮೆಯಾಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ಕಾರಣಿಕ ಪುರುಷರಾದ ಅವಳಿ ವೀರರು ನನಗೆ ಕ್ಷಮೆ ಕರುಣಿಸಬೇಕು. ತನ್ನ ತಪ್ಪನ್ನು ಮನ್ನಿಸುವಂತಹ ಅನುಗ್ರಹವನ್ನು ಕರುಣಿಸಬೇಕೆಂದು ಕೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು