Sunday, November 24, 2024
ಹೆಚ್ಚಿನ ಸುದ್ದಿ

ಇಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಕೆಡ್ಡಸ ಆಚರಣೆ-ಕಹಳೆ ನ್ಯೂಸ್

ಕಲ್ಲಡ್ಕ : ಇಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಕೆಡ್ಡಸ” ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಉಪಸ್ಥಿತಿಯಲ್ಲಿ, ತುಳಸಿ ಕಟ್ಟೆಯ ಮುಂದೆ ಗೋಮಯದಿಂದ ಶುದ್ದೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ , ದೀಪ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಿಸಿನ ಕುಂಕುಮ, ಪಚ್ಚೆ ಹೆಸರುಪುಡಿ, ವೀಳೆದ್ಯೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕೋಸ್ಕರ ಇಟ್ಟು ಹುರುಳಿ, ಹೆಸರು ಕಾಳು, ಒಣ ಕೊಬ್ಬರಿ, ಕಡಲೆ ಕಾಯಿಗಳ ಮಿಶ್ರಣ(ನನ್ಯೆರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು(ಸಾರ್ನಡ್ಡೆ) ಊರಿನ ಹಿರಿಯ ತಾಯಿಯಾದ ಜಯಂತಿ ಹಾಗೂ ಸುಶೀಲರವರು ಭೂಮಿಗೆ ಎಣ್ಣೆ, ಹಾಲು ಹಾಕಿ ಬಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅಧ್ಯಾಪಕ ವೃಂದದವರು ಸಹಕರಿಸಿದರು. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪ್ರೀತಾರವರು ಕೆಡ್ಡಸದ ಮಹತ್ವವನ್ನು ತಿಳಿಸುತ್ತಾ ತುಳುನಾಡಿನಲ್ಲಿ ವಾರ್ಷಿಕಾ ವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಕೃಷಿ ಸಂಬಂದಿಯಾಗಿ ಇದರ ಆಚರಣೆಯಾಗುತ್ತದೆ. ಸಮೃದ್ಧಿ ಮತ್ತು ಫಲಾಪೇಕ್ಷೆಯ ಆಶಯದಿಂದ ಇದು ಆಚರಣೆಯಾಗುತ್ತದೆ. ಇದು ತುಳು ತಿಂಗಳ ಪೊನ್ನಿ(ಮಕರ)27ಕ್ಕೆ ಭೂಮಿ ದೊಡ್ಡವಾದಳೆಂಬ ನಂಬಿಕೆ. ಕೆಡ್ಡಸ ಆಚರಣೆಯನ್ನು ಭೂಮಿ ತಾಯಿಯು ಸಾಮಾನ್ಯ ಸ್ತ್ರೀ ಎಂಬಂತೆ ಪರಿಭಾವಿಸಿದ್ದಾರೆ. ಹೆಣ್ಣಿನಂತೆ ಭೂಮಿಯ ರಜೋಮಯೋವಾಗುತ್ತಾಳೆ ಎಂದು ಭಾವಿಸಿ, ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ.

ಕೆಡ್ಡಸಗಳಲ್ಲಿ ಶುರುಕೆಡ್ಡಸ, ನಡುಕೆಡ್ಡಸ ಮತ್ತು ಕಡೆಕೆಡ್ಡಸ ಎಂದು ಮೂರು ದಿನಗಳ ಕಾಲ ಆಚರಣೆ ಮಾಡುತ್ತಾರೆ. ಕೆಡ್ಡಸದ ಎರಡನೇ ದಿನ ಬೇಟೆ ಸಂಸ್ಕøತಿಯೂ ಇತ್ತು, ಇದು ಕೃಷಿಯ ಸಂರಕ್ಷಣಾ ವಿಧಾನವಾಗಿದೆ. ತುಳುನಾಡಿನ ಜನರು ಪ್ರಕೃತಿಯ ಆರಾಧಕರಾಗಿರುವುದರಿಂದ ಈ ಆಚರಣೆಯನ್ನು ತಲಾತಲಾಂತರದಿಂದ ಮಾಡಿಕೊಂಡು ಬರಲಾಗಿದೆ. ಈ ಸಮಯದಲ್ಲಿ ಪ್ರಕೃತಿಕೂಡತೆನೆ ಬಿಡಲು ಸಜ್ಜಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ನೇಪಥ್ಯಕ್ಕೆ ಸರಿದಿರುವುದು ಖೇಧಕರ. ಮನೆಮನೆಯಲ್ಲಿಯೂ ಈ ಆಚರಣೆಯಿಂದ ಭೂಮಿಯ ಬಗ್ಗೆ ಗೌರವ ಮೂಡುವುದಲ್ಲದೇ ಹೆಣ್ಣನ್ನು ಭೂಮಿಗೆ ಆರೋಪಿಸುವ ಒಳಾರ್ಥದೊಂದಿಗೆ ಪ್ರತಿಯೊಬ್ಬರು ಪ್ರಕೃತಿಯನ್ನು ಗೌರವಿಸುತ್ತಾನೆ. ಕೆಡ್ಡಸ ಕೇವಲ ಆಚರಣೆ ಮಾತ್ರವಲ್ಲ, ಇದು ಅಧ್ಯಯನ ವಿಷಯವಾಗಿದೆ ಎಂದು ಹೇಳಿದರು. ಶಾಲೆಯಲ್ಲಿ ಇಂತಹ ಆಚರಣೆ ಮಾಡಿರುವಂತದ್ದು ನಿಜವಾಗಿಯೂ ತುಳುನಾಡಿನ ಪದ್ಧತಿ ಉಳಿಸಿದಂತೆ.

ವಿದ್ಯಾರ್ಥಿಗಳು ಈ ಆಚರಣೆಯನ್ನು ಮನೆಯಲ್ಲಿಯೂ ಹಿರಿಯರೊಂದಿಗೆ ಸೇರಿ ಮಾಡುವುದರೊಂದಿಗೆ ತುಳುನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಇಂತಹ ಆಚರಣೆಗಳಿಂದ ಆಗಬೇಕು. ಎಂದು ಊರಿನ ಹಿರಿಯ ತಾಯಿಯಾದ ಜಯಂತಿಯವರು ನುಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕೆಡ್ಡಸದ ವಿಶೇಷತೆ ತಿಳಿಸುವ ಗೀತೆ ಹಾಡಿದರು. ತಬಲದಲ್ಲಿ 6ನೇ ತರಗತಿಯ ಸುಶಾನ್ ಹಾಗೂ ಹಾರ್ಮೋನಿಯಂನಲ್ಲಿ 7ನೇ ತರಗತಿಯ ದುರ್ಗಾಶರಣ್ ಸಹಕರಿಸಿದನು. ಕೆಡ್ಡಸದ ವಿಶೇಷ ತಿನಿಸಾದ ನವ ವಿಧದ ಧಾನ್ಯಗಳಿಂದ ತಯಾರಿಸಿದ ನನ್ಯೆರಿಯನ್ನು ಅತಿಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಂಚಲಾಯಿತು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಜಯರಾಮ್‍ರೈ, ಊರಿನ ಹಿರಿಯರಾದ ಜಯಂತಿ ಹಾಗೂ ಸುಶೀಲ, ಮಾತೃಭಾರತೀಯ ಸದಸ್ಯರು ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವಾಸವಿ ಕೆ ಸಿ ನಿರೂಪಿಸಿ, ಭೂಷಣ್ ಸ್ವಾಗತಿಸಿ, ಚಂದ್ರಕಲಾ ವಂದಿಸಿದರು.