Saturday, January 25, 2025
ಹೆಚ್ಚಿನ ಸುದ್ದಿ

ಮಚ್ಚಿನ ಗ್ರಾ.ಪಂ ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ಡಾಜೆ ಮತ್ತು ಉಪಾಧ್ಯಕ್ಷರಾಗಿ ಡೀಕಮ್ಮ ಅಶೋಕ್ ಕುಲಾಲ್ ಅವಿರೋಧ ಆಯ್ಕೆ-ಕಹಳೆ ನ್ಯೂಸ್

ಮಚ್ಚಿನ : ಮಚ್ಚಿನ ಗ್ರಾಮ ಪಂಚಾಯತ್‍ನ 14 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದು, ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ಡಾಜೆ ಹಾಗೂ ಉಪಾಧ್ಯಕ್ಷರಾಗಿ ಡೀಕಮ್ಮ ಅಶೋಕ್ ಕುಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳೆ ಸ್ಥಾನ ಮೀಸಲಾತಿ ನಿಗದಿಯಾಗಿದ್ದು, ಮಚ್ಚಿನ ವಾರ್ಡ್-4 ರಿಂದ ಚಂದ್ರಕಾಂತ ನಿಡ್ಡಾಜೆ ಹಾಗೂ 5ನೇ ವಾರ್ಡ್‍ನಿಂದ ಡೀಕಮ್ಮ ಅಶೋಕ್ ಕುಲಾಲ್ ಸ್ಪರ್ಧಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶೇಷ ಗಿರಿ ನಾಯಕ್ ಅವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿ ಶಂಕರ್, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು