Saturday, January 25, 2025
ಸುದ್ದಿ

ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರೊಫೆಸರ್ ಕೆರೊಲಿನಾ ಜೆನೆಫರ್ ಅವರಿಗೆ ಪಿಎಚ್‍ಡಿ ಪದವಿ-ಕಹಳೆ ನ್ಯೂಸ್

ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರೊಫೆಸರ್ ಕೆರೊಲಿನಾ ಜೆನೆಫರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ ಪದವಿ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆರೊಲಿನಾ ಜೆನಿಫರ್‍ರವರು ವಾಲ್ಟರ್ ಜಯಕುಮಾರ್ ಮತ್ತು ಕ್ಲೆಮೆಂಟಿನಾ ಪ್ರಭಾವತಿ ದಂಪತಿಯ ಪುತ್ರಿ ಹಾಗೂ ಮಧುಸೂಧನ್ ಶೆಟ್ಟಿ ಜಪ್ಪಿನಮೊಗರು ಅವರ ಪತ್ನಿಯಾಗಿದ್ದಾರೆ. ಕೆರೊಲಿನಾ ಬರೆದಿರುವ ‘ಕಸ್ಟಮರ್  ಪ್ರೊಟೆಕ್ಷನ್ ಇನ್ ಬ್ಯಾಂಕಿಂಗ್ ಸೆಕ್ಟರ್ ಇನ್ ದಿ ಇರಾ ಆಫ್ ಗ್ಲೋಬಲೈಸೇಶನ್ – ಓ ಸ್ಟಡಿ ಇನ್ ದಿ ಕೋಸ್ಟಲ್ ಡಿಸ್ಟ್ರಿಕ್ಟ್ಸ್ ಆಫ್ ದಿ ಕರ್ನಾಟಕ’ (ಜಾಗತೀಕರಣದ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ರಕ್ಷಣೆ- ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು ಅಧ್ಯಯನ) ಎಂಬ ಪ್ರಬಂಧಕ್ಕೆ ಪಿಎಚ್‍ಡಿ ಪವಿ ಲಭಿಸಿದೆ. ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಅಬೂಬಕರ್ ಸಿದ್ದೀಕಿ ಮಾರ್ಗದರ್ಶನದಲ್ಲಿ ಅವರು ಈ ಪ್ರಬಂಧವನ್ನು ಮಂಡಿಸಿದ್ದಾರೆ.