Recent Posts

Monday, January 27, 2025
ಪುತ್ತೂರು

ಟೀಕಿಸುವವರ ಬಗ್ಗೆ ಎಂದಿಗೂ ಯೋಚಿಸಬಾರದು ; ಡಾ. ಶ್ರೀಶ ಭಟ್-ಕಹಳೆ ನ್ಯೂಸ್

ಪುತ್ತೂರು : ಅವಕಾಶಗಳು ಬಂದಾಗ ಅದನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಯಾವುದೇ ಕೆಲಸದ ಪ್ರಾರಂಭದಲ್ಲಿ ತಪ್ಪು ಇದ್ದೆ ಇರುತ್ತದೆ, ಆ ತಪ್ಪುಗಳು ನಮ್ಮ ಮುಂದಿನ ಕೆಲಸವನ್ನು ಬದಲಾಯಿಸಿ ಯಶಸ್ಸಿಗೆ ಕಾರಣವಾಗುತ್ತದೆ. ವೇದಿಕೆಗೆ ಬಂದು ಮಾತನಾಡುವ ಧೈರ್ಯ ಇದ್ದರೆ ಏನನ್ನು ಸಾಧಿಸಬಹುದು. ಆದರೆ ಹಿಂದೆಯಿಂದ ಟೀಕಿಸುವವರ ಬಗ್ಗೆ ನಾವು ಎಂದಿಗೂ ಯೋಚಿಸಬಾರದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ಸಮಸ್ಯೆಗಳು ಜೀವನದಲ್ಲಿ ಹೇಗಿದೆಯೋ ಅದಕ್ಕೆ ಪರಿಹಾರಗಳು ಅನೇಕ ರೀತಿಯಲ್ಲಿವೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಶ ಭಟ್ ಹೇಳಿದರು. ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಸಹಯೋಗದಲ್ಲಿ ಐಕ್ಯೂಎಸಿ ಮತ್ತು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ‘ಜೀವನ ಕೌಶಲ್ಯ’ ಸರ್ಟಿಫಿಕೇಟ್ ಕೋರ್ಸ್ ಸಂಬಂಧಿಸಿದಂತೆ ಆಯೋಜಿಸಿದ ಹ್ಯಾಕಥಾನ್ ಪ್ರಸೆಂಟೇಷನ್ ಮತ್ತು ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಇಡೀ ವಿಶ್ವವೇ ಈಗ ಸ್ಪರ್ಧಾತ್ಮಕ ಜಗತ್ತಾಗಿರುವುದರಿಂದ, ವಿದ್ಯಾರ್ಥಿಗಳಲ್ಲು ಒಂದು ಹಂತದಲ್ಲಿ ಸ್ಪರ್ಧೆ ಇರಬೇಕು. ಜೊತೆಗೆ ಕೌಶಲ್ಯಗಳನ್ನು ಎಲ್ಲಾ ಕಡೆಗಳಲ್ಲಿ ಬಳಸಿಕೊಳ್ಳಬೇಕು. ವಿಶ್ವಾಸವನ್ನು ಜೊತೆಯಲ್ಲಿ ಹಿಡಿದುಕೊಂಡು ಯಾವುದಕ್ಕೂ ಹಿಂಜರಿಯದೆ ಮುಂದು ಬರಲು ಪ್ರಯತ್ನಿಸಿದರೆ ಸಮಾಜಕ್ಕೆ ಪರಿಪೂರ್ಣವಾದ ವ್ಯಕ್ತಿಯಾಗಲು ಸಾಧ್ಯ ಎಂದು ನುಡಿದರು. ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ., ವ್ಯವಹಾರ ಆಡಳಿತದ ಮುಖ್ಯಸ್ಥೆ ರೇಖಾ ಪಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ, ಉಪನ್ಯಾಸಕಿಯರಾದ ವಿನುತಾ ಕೆ. ಮತ್ತು ಅಭಿಲಾಷ ಕೆ. ಉಪಸ್ಥಿತರಿದ್ದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಶರಣ್ಯ ಸ್ವಾಗತಿಸಿ, ತೃತೀಯ ಬಿ.ಬಿ.ಎ. ಅಭಿಷೇಕ್ ಧನ್ಯವಾದಿಸಿದರು. ತೃತೀಯ ಬಿ.ಕಾಂ. ಅರ್ಚನಾ ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.