Sunday, January 26, 2025
ಸುದ್ದಿ

ಜಗತ್ತಿನ ಎಲ್ಲಾ ಮೂಲೆಯಲ್ಲೂ ವಿಜ್ಞಾನಕ್ಕೆ ವಿಶೇಷ ಸ್ಥಾನವಿದೆ ; ಡಾ. ಅಪ್ಪಾಜಿಗೌಡ ಎಸ್.ಬಿ-ಕಹಳೆ ನ್ಯೂಸ್

ಮಂಗಳೂರು : ವಿಜ್ಞಾನವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ, ವಿಜ್ಞಾನ ಎಂಬುದು ಸಾರ್ವತ್ರಿಕವಾಗಿದ್ದು ಜಗತ್ತಿನ ಎಲ್ಲಾ ಮೂಲೆಯಲ್ಲೂ ವಿಜ್ಞಾನಕ್ಕೆ ವಿಶೇಷ ಸ್ಥಾನವಿದೆ ಎಂದು ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಅಪ್ಪಾಜಿಗೌಡ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಫೆಬ್ರವರಿ 11 ರಂದು ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 21ನೇ ಶತಮಾನದ ವಿದ್ಯಾರ್ಥಿಗಳಿಗೆ ವಿಜ್ಞಾನ ತಂತ್ರಜ್ಞಾನ ಸಂಶೋಧನೆ ನಡೆಸಲು, ಬೆಲೆ ಬಾಳುವ ಉಪಕರಣಗಳ ಅವಶ್ಯಕತೆಯಿಲ್ಲ. ಸರ್ ಸಿ.ವಿ. ರಾಮನ್ ಕಡಿಮೆ ಬೆಲೆಯ ಉಪಕರಣದ ಮೂಲಕವೇ ತಮ್ಮ ಸಂಶೋಧನೆಯನ್ನು ಮಾಡುತ್ತಿದ್ದರು ಎಂದ ಅವರು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಇಂತಹ ಪ್ರದರ್ಶನಗಳು ಅತ್ಯಂತ ಸಹಾಯಕಾರಿ ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಖಜಾಂಚಿ ಬಸವರಾಜು ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಹಂತದಲ್ಲಿ ವಿಜ್ಞಾನ ಕಲಿಕೆಗಿಂತ ಸಂಶೋಧನೆ ಮಾಡುವಾಗ ಸ್ವಶಕ್ತಿ, ಸಾಮಥ್ರ್ಯದ ಕಡೆಗೆ ನಂಬಿಕೆಯಿರಬೇಕೇ ಹೊರತು ಆ ಕೇಂದ್ರಿಯ ಶಕ್ತಿಯನ್ನು ಅವಲಂಬಿಸಬಾರದು, ಅದರಿಂದ ಹೆಚ್ಚಿನ ಸಂಶೋಧನೆಗೆ ಅಪಾಯವಿದೆ ಎಂದರು. ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಡಾ. ರಾಮಚಂದ್ರ ಮಾತನಾಡಿ, ಸರ್ ಸಿ.ವಿ ರಾಮನ್ ಅವರ ನಂತರ ವಿಜ್ಞಾನ ಕ್ಷೇತ್ರಕ್ಕೆ ನೋಬೆಲ್ ಪ್ರಶಸ್ತಿ ಬಂದಿರುವುದಿಲ್ಲ, ವಿದ್ಯಾರ್ಥಿಗಳು ಇದರ ಕಡೆಗೆ ಗಮನಹರಿಸಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನಲ್ಲಿ ಮಾಡುವ ಸಣ್ಣ ಪ್ರಯತ್ನಗಳು ವ್ಯಕ್ತಿಗಳನ್ನು ಬಹು ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಕೇವಲ ಪ್ರಶಸ್ತಿಗಾಗಿ ಅಲ್ಲದೇ ಅನುಭವಕ್ಕಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಡಾ. ಶಿವರಾಮ ಪಿ. ಉಪಸ್ಥಿತರಿದ್ದರು. ವಸ್ತು ಪ್ರದರ್ಶನದ ಸಂಯೋಜಕರಾದ ಡಾ. ಸುಧಾಕರನ್ ಟಿ. ಸ್ವಾಗತಿಸಿ, ಡಾ. ಕೃಷ್ಣಪ್ರಭಾ ಎಂ ವಂದಿಸಿದರು. ವಿಜ್ಞಾನ ವಸ್ತು ಪ್ರದರ್ಶನದ ತೀರ್ಪುಗಾರರಾಗಿ ಡಾ. ಜಯಂತ್, ಡಾ. ಪ್ರಸನ್ನ ರೈ, ಡಾ. ಸಾರಮ್ಮ ಹಾಗೂ ಡಾ. ಸರೋಜಿನಿ ಆಚಾರ್ಯ ಕಾರ್ಯ ನಿರ್ವಹಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ 45 ಕ್ಕೂ ಹೆಚ್ಚು ತಂಡ ಭಾಗವಹಿಸಿದ್ದವು.