Saturday, January 25, 2025
ಸುದ್ದಿ

ಬಡತನ ನಿರ್ಮೂಲನೆಗೆ ಜಾಗೃತಿ, ಸಶಕ್ತೀಕರಣವೇ ಮಾರ್ಗ; ಡಾ. ರಾಧಾಕೃಷ್ಣ .ಕೆ –ಕಹಳೆ ನ್ಯೂಸ್

ಮಂಗಳೂರು : ಪ್ರಾಯೋಗಿಕವಾಗಿ ಬಡತನ ನಿರ್ಮೂಲನೆಗೆ ಜನರ ನಿರಾಸಕ್ತಿ, ಜಡತ್ವ, ನಿರ್ಲಕ್ಷ್ಯ ಇತ್ಯಾದಿಗಳೇ ಮೂಲ ಕಾರಣ ಎಂದು ನಗರದ ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ರಾಧಾಕೃಷ್ಣ ಕೆ. ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಫೆಬ್ರವರಿ 11 ರಂದು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಹೊಸ ಬ್ಯಾಚ್‍ನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪ್ರೋ. ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫೋಲ್ಲೀ ವಿರಚಿತ ನೊಬೆಲ್ ಪುರಸ್ಕøತ ಕೃತಿ ʼಪುವರ್ ಎಕನಾಮಿಕ್ಸ್ʼ ಅನ್ನು ಉಲ್ಲೇಖಿಸಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಬಡತನ ನಿವಾರಣೆಯಲ್ಲಿ ಈ ಕೃತಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರ್ಥಶಾಸ್ತ್ರ ಕೃತಿ ಪರಿಚಯ ಮಾಡಿಕೊಳ್ಳುವುದು ಮತ್ತು ಸಾಮಾನ್ಯ ಜ್ಞಾನ ವಿಸ್ತರಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯವಶ್ಯ ಎಂದರು. ಈ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಬಿ ಎಂ, ಶಮಾ ಐ.ಎನ್.ಎಂ. ಮತ್ತು ಆದರ್ಶ್ ಹೆಚ್.ಬಿ., ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಹರೀಶ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು