Saturday, January 25, 2025
ಹೆಚ್ಚಿನ ಸುದ್ದಿ

ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿಗೆ ಸಮ್ಯಕ್ತ್ ಜೈನ್ ಆಯ್ಕೆ; ನಾಳೆ ಸುಳ್ಯದಲ್ಲಿ ಪ್ರಶಸ್ತಿ ಪ್ರಧಾನ-ಕಹಳೆ ನ್ಯೂಸ್

ನೂಜಿಬಾಳ್ತಿಲ : ಸುಳ್ಯದಲ್ಲಿ ನಾಳೆ ನಡೆಯುವ ಕವಿ ಸಂಗಮ-ಕವಿ ಸಂಭ್ರಮ ಕಾರ್ಯಕ್ರಮದಲ್ಲಿ ನೀಡಲಿರುವ 2021 ನೇ ಸಾಲಿನ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಗೆ ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರು ಆಯ್ಕೆಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಮತ್ತು ಮಂಜುಳಾ ರವರ ಸುಪುತ್ರರಾಗಿದ್ದು, ಇದುವರೆಗೆ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಲೋಕದಲ್ಲಿ ಮುಂದುವರೆಯುತ್ತಿರುವ ಇವರು ಈಗಾಗಲೇ ಹಲವಾರು ರಾಜ್ಯ ಅಂತರ್ರಾಜ್ಯ ಮಟ್ಟದ ಬಹುಮಾನಗಳಿಗೆ ಮತ್ತು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಹಾಗೂ ಪ್ರಸ್ತುತ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜು ಇಲ್ಲಿ ಮುಂದುವರಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು