Friday, April 11, 2025
ಹೆಚ್ಚಿನ ಸುದ್ದಿ

ಪಾಣೆಮಂಗಳೂರಿನ ಶ್ರೀ ವೀರ ವಿಠಲ ವೆಂಕಟರಮಣ ಸ್ವಾಮಿಗೆ ಶತ ಕಲಶಾಭಿಷೇಕ-ಕಹಳೆ ನ್ಯೂಸ್

ಪಾಣೆಮಂಗಳೂರು : ಪಾಣೆಮಂಗಳೂರಿನ ಶ್ರೀ ವೀರ ವಿಠಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ದೇವರ ಪ್ರೀತ್ಯರ್ಥ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಶತ ಕಲಶಾಭಿಷೇಕ, ಗಂಗಾಭಿಷೇಕ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಹತ್ತು ಸಮಸ್ತರ ಪರವಾಗಿ ಶ್ರೀದೇವರಿಗೆ ಸ್ವರ್ಣ ಮಾಲೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಪಿ.ರಘವೀರ್ ಭಂಡಾರ್ಕಾರ್, ವಿಶ್ವನಾಥ್ ಶೆಣೈ, ಪ್ರಭಾಕರ್ ಪೈ, ಉದ್ಯಮಿ ಡಾ.ಎಂ. ಜಗನ್ನಾಥ್ ಶೆಣೈ ಮತ್ತು ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ