Saturday, January 25, 2025
ಹೆಚ್ಚಿನ ಸುದ್ದಿ

ನನ್ನ ಅಜ್ಜಿ ಮತ್ತು ತಂದೆ ಒಂದು ವಿಚಾರಕ್ಕಾಗಿ ಹತ್ಯೆಯಾಗಿದ್ದು, ಇದರ ಬಗ್ಗೆ ನನಗೆ ಹೆಮ್ಮೆಯಿದೆ.; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ-ಕಹಳೆ ನ್ಯೂಸ್

ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಂದು ವಿಚಾರಕ್ಕಾಗಿ ಸಮರ್ಥ ನಿರ್ಧಾರ ಕೈಗೊಂಡಿದ್ದರಿಂದ ನನ್ನ ತಂದೆ ರಾಜೀವ್ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಹತ್ಯೆಯಾಗಿದ್ದು, ಇದು ನನಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಹುಲ್ ಗಾಂಧಿ, ಅವರು ನನ್ನ ಅಜ್ಜಿ ಮತ್ತು ತಂದೆ ಒಂದು ವಿಚಾರಕ್ಕಾಗಿ ಹತ್ಯೆಯಾಗಿದ್ದು, ಇದರ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಅವರ ಬಗ್ಗೆ ನನ್ನ ಸ್ಥಾನದ ಬಗ್ಗೆ ಮತ್ತು ನಾನೇನು ಮಾಡಬೇಕು ಎನ್ನುವ ಬಗ್ಗೆ ನನಗೆ ಅರ್ಥ ಮಾಡಿಸುತ್ತದೆ ಎಂದು ಈ ಕುರಿತು ಚಿಕಾಗೋ ವಿಶ್ವವಿದ್ಯಾಲಯದ ದೀಪೇಶ್ ಚಕ್ರವರ್ತಿ ಜೊತೆಗೆ ನಡೆಸಿದ ವರ್ಚುವಲ್ ಚರ್ಚೆಯಲ್ಲಿ ಮಾತನಾಡಿದರು. ಇನ್ನು ಕಾಂಗ್ರೆಸ್‍ನ ಕುಟುಂಬ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕುಟುಂಬದ ಮೇಲೆ ಈ ಆಪಾದನೆ ನನಗೆ ಅಚ್ಚರಿ ಮೂಡಿಸುತ್ತದೆ. ನಮ್ಮ ಕುಟುಂಬ ಸದಸ್ಯರು ಪ್ರಧಾನ ಮಂತ್ರಿಯಾಗಿ 30 ವರ್ಷಗಳೇ ಕಳೆಯಿತು ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು