Sunday, January 19, 2025
ಪುತ್ತೂರು

BREAKING NEWS:- ಪುತ್ತೂರಿನ ಮುರ ರೈಲ್ವೆ ಹಳಿಯಲ್ಲಿ ಬಾರ್ ಸಪ್ಲೈಯರ್ ನ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಅನುಮಾನ- ಕಹಳೆ ನ್ಯೂಸ್

ಪುತ್ತೂರು: ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾದ ಘಟನೆ ಫೆ. ೧೨ರ ತಡ ರಾತ್ರಿ ಬೆಳಕಿಗೆ ಬಂದಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಗೆ ಸಂಬಂಧಿಸಿ ವ್ಯಕ್ತಿಗೆ ರೈಲು ಡಿಕ್ಕಿಯಾದ ಯಾವುದೇ ಗುರುತು ಇಲ್ಲದಿರುವುದರಿಂದ ಕೊಲೆ ಮಾಡಲಾಗಿದೆ ಎಂದು ಅನುಮನಿಸಲಾಗಿದೆ. ಮೂಲತಃ ಮಡಿಕೇರಿ ನಿವಾಸಿ ಮುರದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವ ಸೋಮಣ್ಣ(೩೨ವ)ರವರು ಮೃತಪಟ್ಟವರು.

ಅವರು ಹೊಟೇಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಫೆ. ೧೨ರ ಎಂದಿನಂತೆ ರಾತ್ರಿ ೧೧ ಗಂಟೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸೋಮಣ್ಣ ಅವರ ಪತ್ನಿ ಪುತ್ತೂರು ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿರುವ ಭಾಗ್ಯ ಅವರು ಹುಡುಕಾಡಿಕೊಂಡು ಬಂದಿದ್ದ ವೇಳೆ ರೈಲ್ವೇ ಹಳಿಯಲ್ಲಿ ಗಂಡ ಸೋಮಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು. ಘಟನೆ ಕುರಿತು ಪುತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಕೊಂಡು ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.