Recent Posts

Monday, January 20, 2025
ಬೆಂಗಳೂರು

ಮಾರ್ಚ್ 5ಕ್ಕೆ ಬಿಡುಗಡೆಯಾಗಲಿದೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಹೀರೊ’-ಕಹಳೆ ನ್ಯೂಸ್

ಬೆಂಗಳೂರು : ಮಾರ್ಚ್ 5ಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಹೀರೊ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ರಿಷಬ್ ಶೆಟ್ಟಿ ಅವರು ನಿಮ್ಮೆಲ್ಲರಿಗೂ ಅಶೋಕವನ ಎಸ್ಟೇಟಿಗೆ ಸ್ವಾಗತ. ಹೀರೊ ಸಿನೆಮಾ ಮಾರ್ಚ್ 5ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ. ನಿಮ್ಮೆಲ್ಲರ ಪ್ರೀತಿಯಿರಲಿ ಎಂದು ಕುರಿತು ಟ್ವೀಟ್ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತು ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷಣ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ರಿಷಬ್ ಈ ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಿಡುಗಡೆ ದಿನಾಂಕದೊಂದಿಗೆ ಚಿತ್ರದ ಪೋಸ್ಟರ್‌ವೊಂದನ್ನು ರಿಷಬ್ ಹಂಚಿಕೊಂಡಿದ್ದು, ಪೋಸ್ಟರ್‌ನಲ್ಲಿ  ರಕ್ತಸಿಕ್ತ ಮುಖದೊಂದಿಗೆ ಗನ್ ಹಿಡಿದು ಕುಳಿತಿರುವ ಅವರ ಹಿಂದೆ ಗನ್ ಹಿಡಿದು ನಾಯಕಿ ನಿಂತಿದ್ದಾರೆ.