Monday, January 20, 2025
ಹೆಚ್ಚಿನ ಸುದ್ದಿ

ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ ; ಹಸಿವಿನಿಂದ ಗೋಗರೆದ ಕಂದಮ್ಮನಿಗೆ ಆಸರೆಯಾದ ಖಾಕಿ ಪಡೆ-ಕಹಳೆ ನ್ಯೂಸ್

ಗದಗ : ಗಜೇಂದ್ರಗಡ ಪಟ್ಟಣದ ಸ್ಥಳೀಯ ಬಸ್ ನಿಲ್ದಾಣದಲ್ಲಿ ಪತ್ತೆಯಾದ ನವಜಾತ ಶಿಶುವನ್ನು ಪೋಲಿಸರು ರಕ್ಷಿಸಿ ಜಿಲ್ಲಾಸ್ವತ್ರೆಗೆ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಸ್ ನಿಲ್ದಾಣದ ಬಳಿ ಇದ್ದ ಸ್ಥಳೀಯರು ನವಜಾತ ಶಿಶುವಿನ ಆಳುವ ಧ್ವನಿ ಆಕಸ್ಮಿಕವಾಗಿ ಕೇಳಿಸಿದೆ. ಹಾಗಾಗಿ ಸಾರ್ವಜನಿಕರು ಹುಡುಕಿದಾಗ ಬಟ್ಟೆಯಲ್ಲಿ ಸುತ್ತಿದ್ದ ನವಜಾತ ಗಂಡು ಶಿಶು ಸಿಕ್ಕಿದ್ದು, ಸಮೀಪದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಗಜೇಂದ್ರಗಡ ಠಾಣೆಯ ಹಿರಿಯ ಅಧಿಕಾರಿ ಭೀಮರಾಜ್, ಮಗುವನ್ನ ತಮ್ಮ ವಶಕ್ಕೆ ಪಡೆದುಕೊಂಡು ಸ್ಥಳೀಯರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಷ್ಟರಲ್ಲೇ ಮಗು ಹಸಿವಿನಿಂದ ಅತ್ತು ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ಪೊಲೀಸರು ಮಗುವನ್ನು ಜಿಲ್ಲಾಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು