Monday, January 20, 2025
ಹೆಚ್ಚಿನ ಸುದ್ದಿ

ಬಿಜೆಪಿ ಸದಸ್ಯರಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಹಾಕಿ ಯಡವಟ್ಟು ಮಾಡಿದ ಸದಸ್ಯ-ಕಹಳೆ ನ್ಯೂಸ್

ಕೊಪ್ಪಳ : ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಸದಸ್ಯರಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ವ್ಯಕ್ತಿಯೋರ್ವ ಅಶ್ಲೀಲ ಚಿತ್ರವನ್ನು ಹರಿಯಬಿಟ್ಟ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದಾಗಿ ಗ್ರೂಪ್ ನಲ್ಲಿದ್ದ ಸದಸ್ಯರು ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಯಾವುದೋ ಬೇರೆ ಗ್ರೂಪ್ ಅಂದುಕೊಂಡೋ ಅಥವಾ ಯಾರಿಗೋ ಅಶ್ಲೀಲ ಚಿತ್ರವನ್ನು ಹಾಕಿದ್ದಾನೆ. ಈ ವೇಳೆಯಲ್ಲಿ ಆ ವಿಡಿಯೋ ಬಿಜೆಪಿ ಗ್ರೂಪ್ ಗೆ ಬಿದ್ದಿದೆ. ಬಿಜೆಪಿ ಗ್ರೂಪ್ ಗೆ ವಿಡಿಯೋ ಬಿದ್ದ ತಕ್ಷಣವೇ ಆತ ಗಮನಿಸಿ ವಿಡಿಯೋ ಡಿಲೀಟ್ ಮಾಡಿದ್ದಾನೆ. ಆದರೆ ಭಯ ಗಾಬರಿಯಿಂದ ಡಿಲೀಟ್ ಮಾಡಿದ ವೇಳೆ ಡಿಲೀಟ್ ಫಾರ್ ಮೀ ಎಂಬ ಆಯ್ಕೆಯನ್ನು ಆತ ಒತ್ತಿದ್ದು, ಪರಿಣಾಮವಾಗಿ ವಿಡಿಯೋ ಗ್ರೂಪ್ ನಲ್ಲಿಯೇ ಉಳಿದು ಕೊಂಡಿದೆ. ಅಶ್ಲೀಲ ಮೆಸೇಜ್ ಗ್ರೂಪ್ ನಲ್ಲಿ ಬಂದಿದ್ದರಿಂದಾಗಿ ಗ್ರೂಪ್ ನಲ್ಲಿದ್ದ ಸದಸ್ಯರಿಗೆ ಮುಜುಗರ ಉಂಟಾಗಿದೆ. ಮಹಿಳಾ ಸದಸ್ಯರು ತಕ್ಷಣವೇ ಗ್ರೂಪ್ ನಿಂದ ಎಕ್ಸಿಟ್ ಆಗದ್ದಾರೆ. ಈ ಗ್ರೂಪ್ ನಲ್ಲಿ ಒಬ್ಬರು ಶಾಸಕರು ಕೂಡ ಇದ್ದರು ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು