ಜಯಲಲಿತಾ ಆಪ್ತೆ ವಿ ಶಶಿಕಲಾ ನಟರಾಜನ್ ಅವರನ್ನು ಬೆಂಬಿಡದ ಐಟಿ ; ಕೋಟ್ಯಾಂತರ ಆಸ್ತಿ ಸರ್ಕಾರದ ವಶ-ಕಹಳೆ ನ್ಯೂಸ್
ಚೆನ್ನೈ : ತೆರಿಗೆ ಇಲಾಖೆ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಜಯಲಲಿತಾ ಆಪ್ತೆ ವಿ ಶಶಿಕಲಾ ನಟರಾಜನ್ ಅವರಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರೆಸಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರು ಜೈಲು ಸೇರಿದ್ದಾಗ ಸುಮಾರು 2000 ಕೋಟಿ ರು ಮೌಲ್ಯದ ಅಸ್ತಿ ಜಪ್ತಿ ಮಾಡಲಾಗಿದ್ದು, ಇದೀಗ ಜೈಲಿನಿಂದ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲೇ ಎರಡು ಬಾರಿ ದಾಳಿ ನಡೆಸಲಾಗಿದೆ. ಕಾಂಚಿಪುರಂ, ತಿರುವರೂರ್ ಮತ್ತು ಚೆಂಗಲ್ ಪೇಟ್ ಜಿಲ್ಲೆಗಳಲ್ಲಿರುವ ಶಶಿಕಲಾ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, 2017ರಲ್ಲಿ ಬೇನಾಮಿ ಆಸ್ತಿ ಗಳಿಕೆ, ಅಕ್ರಮ ಹೂಡಿಕೆ, ಶೆಲ್ ಕಂಪನಿಗಳ ಮೇಲೆ ದೂರು ದಾಖಲಾದ ಹಿನ್ನಲೆ ದಾಳಿ ನಡೆಸಲಾಗಿತ್ತು. ಜಯಾಟಿವಿ ಕಚೇರಿ ಸೇರಿದಂತೆ 187 ಸ್ಥಳಗಳಲ್ಲಿ ಸುಮಾರು 700 ಆದಾಯ ತೆರಿಗೆ ಅಧಿಕಾರಿಗಳು ವಿವಿಧೆಡೆ ದಾಳಿ ಮಾಡಿದ್ದಾರೆ. ಸುಮಾರು 300 ಕೋಟಿ ರು ಮೌಲ್ಯದ 144 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ತಂಜಾವೂರಿನಲ್ಲಿ 26,000 ಚದರ ಅಡಿ ಜಾಗ ಹಾಗೂ ತಿರುವರೂರ್ ನಲ್ಲಿ 1050 ಎಕರೆ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಈ ಆಸ್ತಿ ಎಲ್ಲವೂ 1994ರಿಂದ 1996 ಅವಧಿಯಲ್ಲಿ ಅಕ್ರಮವಾಗಿ ಗಳಿಕೆ ಮಾಡಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.