ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಎ ಒಕ್ಕೂಟದ ವತಿಯಿಂದ ಹಾಗೂ ದ.ಕ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ಕ್ಷೇತ್ರ ಸಂಪರ್ಕ ಕೇಂದ್ರ ವಿಟ್ಲ ಇವರ ಕೂಡುವಿಕೆಯೊಂದಿಗೆ ‘ರೈತ ಕ್ಷೇತ್ರ ಪಾಠಶಾಲೆ ‘ಕಾರ್ಯಕ್ರಮ –ಕಹಳೆ ನ್ಯೂಸ್
ಕೆದಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಎ ಒಕ್ಕೂಟದ ವತಿಯಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ಕ್ಷೇತ್ರ ಸಂಪರ್ಕ ಕೇಂದ್ರ ವಿಟ್ಲ ಇವರ ಕೂಡುವಿಕೆಯೊಂದಿಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆದಿಲ ಎ ಒಕ್ಕೂಟದ ಅನುಗ್ರಹ ಪ್ರಗತಿ ಬಂಧು ಸ್ವ-ಸಹಾಯ ಸಂಘದ ಸದಸ್ಯರಾದ ಪೂವಪ್ಪ ಗೌಡ ಪನಡ್ಕ ಇವರ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಣಿ ವಲಯದ ವಲಯ ಅಧ್ಯಕ್ಷರಾದ ತನಿಯಪ್ಪಗೌಡ ಮಾಡಿದರು. ಹಾಗೆಯೇ ಸಂಪನ್ಮೂಲ ವ್ಯಕ್ತಿಯಾಗಿ ನಾಗರಾಜ ಕೃಷಿ ಸಂಶೋಧನಾ ಅಧಿಕಾರಿ ಸಿ.ಪಿ.ಸಿ.ಆರ್.ಐ ವಿಟ್ಲ, ಅವರು ಸಿ.ಪಿ.ಸಿ.ಆರ್.ಐಯಲ್ಲಿ ಸಿಗುವ ಸವಲತ್ತು ಮತ್ತು ಕೃಷಿಯ ಬಗ್ಗೆ ಮಾಹಿತಿ ನೀಡಿದ್ದು, ಹಾಗೂ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ತರಬೇತುಗಳನ್ನು ನೀಡಬಹುದು ಮತ್ತು ಜೇನುಕೃಷಿ ಹಾಗೂ ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿಯಾದ ನಂದಿತಾರವರು ರೈತಕ್ಷೇತ್ರ ಪಾಠ ಶಾಲೆಯ ಬಗ್ಗೆ ತಿಳಿಸಿದರು. ಹಾಗೆಯೇ ಕೆದಿಲ ಎ ಒಕ್ಕೂಟದ ಅಧ್ಯಕ್ಷರಾದ ಈಶ್ವರ ಸಪಲ್ಯ, ಮತ್ತು ಕೆದಿಲ ಎ ಹಾಗೂ ಬಿ ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಜಯಂತಿ ಮತ್ತು ಶಾರದ, ನಿಕಟಪೂರ್ವ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಮಾಣಿವಲಯದ ತರಬೇತು ಸಹಾಯಕರಾದ ಚಂದ್ರಶೇಖರ ಕೆ ಸ್ವಾಗತಿಸಿದ್ದು, ಕೆದಿಲ ಎ ಒಕ್ಕೂಟದ ಸೇವಾಪ್ರತಿನಿಧಿ ಜಯಂತಿ ಧನ್ಯವಾದ ಮಾಡಿದರು. ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಮಾಣಿ ವಲಯ ಮೇಲ್ವಿಚಾರಕರಾದ ಪ್ರೇಮರವರು ಮಾಡಿದರು.