Monday, November 25, 2024
ಸುದ್ದಿ

ಮಂಗಳೂರು ರಾಜ ಕಾಲುವೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ರಾಜ ಕಾಲುವೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 19 ನೇ ಪಚ್ಚನಾಡಿ ವಾರ್ಡ್ ನ ಮುಖ್ಯ ಸೇತುವೆಯಿಂದ ವೈದ್ಯನಾಥಕ್ಕೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಹಾದು ಹೋಗುವ ಕಾಲುವೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಭಾನುವಾರ ಚಾಲನೆ ನೀಡಿದರು. ಈ ಅಭಿವೃದ್ಧಿ ಕಾರ್ಯವು ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ 25 ಲಕ್ಷ ಅನುದಾನದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಪಾಲಿಕೆ ಸ್ಥಳೀಯ ಕಾರ್ಪೋರೇಟರ್ ಸಂಗೀತಾ ಆರ್ ನಾಯಕ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಬಿಜೆಪಿ ಮುಖಂಡರಾದ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಪ್ರಶಾಂತ್ ಪೈ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ರಾಮ ಮುಗ್ರೋಡಿ, ಶಕ್ತಿ ಕೇಂದ್ರ ಪ್ರಮುಖರಾದ ಲಿಂಗಪ್ಪ ಬಂಗೇರ ಹಾಗು ಹರೀಶ್ ಬಂದಲೆ ಹಾಗು ಚಾಮುಂಡಿ ದೈವಸ್ಥಾನದ ಪ್ರಮುಖರಾದ ಲಿಂಗಪ್ಪ ಸ್ವಾಮಿ, ಸ್ಥಳೀಯ ಭಾಗದ ಪಕ್ಷದ ಪ್ರಮುಖರು, ಕಾರ್ಯಕರ್ತರು, ಇಂಜಿನಿಯರ್ ಗುತ್ತಿಗೆದಾರರು ಉಪಸ್ಥಿತರಿದ್ದರು.