ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಗೆ ಕುರಿತು ಟ್ವೀಟ್ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಕರೆಯುವ ಮೂಲಕ ಅಫ್ರಿದಿ ಉದ್ಧಟತನ ತೋರಿದ್ದಾರೆ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದ್ದು, ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಅಲ್ಲಿನ ಮುಕ್ತ ಧ್ವನಿ ಹಾಗೂ ಸ್ವಾತಂತ್ರ್ಯ ಮನೋಭವ ಹೊಂದಿರುವ ಮುಗ್ಧರನ್ನು ಹತ್ಯೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ವಿಶ್ವಸಂಸ್ಥೆ ಮತ್ತು ಆದರ ಇತರೆ ಅಂಗ ಸಂಸ್ಥೆಗಳು ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಯಾವ ಕ್ರಮವನ್ನು ಕ್ರಮಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.
2016 ರ ಟಿ20 ವಿಶ್ವಕಪ್ ವೇಳೆಯೂ ಕಾಶ್ಮೀರ ಕುರಿತು ಅಫ್ರಿದಿ ಟ್ವೀಟ್ ಮಾಡಿದ್ದರು. ಕಾಶ್ಮೀರದ ಬಹಳಷ್ಟು ಜನರು ಪಾಕಿಸ್ತಾನಕ್ಕೆ ಬೆಂಬಲಿಸುತ್ತಾರೆ ಎಂದು ಹೇಳಿ ಬಿಸಿಸಿಐ ನಿಂದ ಛಿಮಾರಿಗೆ ಹಾಕಿಸಿಕೊಂಡಿದ್ದರು.
ಕ್ರೀಡೆಯಲ್ಲಿ ಇಂತಹ ಹೇಳಿಕೆಯನ್ನು ನೀಡುವುದು ಸರಿಯಲ್ಲ. ಆಟಗಾರರು ಇಂತಹ ವಿಷಯಗಳಿಂದ ದೂರ ಉಳಿಯಬೇಕು. ಅದ್ದರಿಂದಲೇ ಪಾಕಿಸ್ತಾನದಲ್ಲಿ ಅಫ್ರಿದಿ ವಿಮರ್ಶೆಗೆ ಗುರಿಯಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು.
ಕೇವಲ ಅಫ್ರಿದಿ ಮಾತ್ರವಲ್ಲದೇ ಪಾಕ್ ಕ್ರಿಕೆಟ್ ತಂಡ ಮಾಜಿ ನಾಯಕ ಇಮ್ರಾನ್ ಖಾನ್ ಸಹ ಸೋಮವಾರ ಕಾಶ್ಮೀರದ ಕುರಿತು ಟ್ವೀಟ್ ಮಾಡಿದ್ದರು. ಸದ್ಯ ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ಪಡೆದಿರುವ ಅಫ್ರಿದಿ ಪಾಕಿಸ್ತಾನ ರಾಜಕೀಯದಲ್ಲಿ ಪ್ರವೇಶ ಪಡೆಯುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.