Sunday, November 24, 2024
ಹೆಚ್ಚಿನ ಸುದ್ದಿ

ವೇದಿಕೆಯಲ್ಲಿ ಬಾಷಣ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ-ಕಹಳೆ ನ್ಯೂಸ್

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಭಾನುವಾರ ಸಂಜೆ ಆಕಸ್ಮಿಕವಾಗಿ ವೇದಿಕೆಯೊಂದರಲ್ಲಿ ಕುಸಿದು ಬಿದ್ದಿದ್ದಾರೆ.

ವಡೋದರಾದ ನಿಜಾಂಪುರ ಪ್ರದೇಶದ ಮೆಹ್ಸಾನನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವಾಗ ರೂಪಾನಿ ಕುಸಿದು ಬಿದ್ದಾಗ ಹಿಂದೆ ನಿಂತಿದ್ದ ಬಾಡಿ ಗಾರ್ಡ್ ಅವನನ್ನು ಹಿಡಿಯಲು ಪ್ರಯತ್ನಿಸಿಲ್ಲ. ಫೆಬ್ರವರಿ 21 ರಂದು ನಡೆಯಲಿರುವ ನಾಗರಿಕ ಸಮಿತಿಗಳ ಚುನಾವಣೆಗೆ ಮುನ್ನ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ರೂಪಾನಿ ವಡೋದರಾಗೆ ಆಗಮಿಸಿದ್ದು, ಎರಡು ಸಭೆಗಳ ನಂತರ ಅವರು ನಗರದ ನಿಜಾಂಪುರ ಪ್ರದೇಶದಲ್ಲಿ ನಡೆದ ಮೂರನೇ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕುಸಿದುಬಿದ್ದಿದ್ದು, ಸಹಾಯಕ್ಕಾಗಿ ಬಿಜೆಪಿ ನಾಯಕರು ಧಾವಿಸಿದರೂ ಅಷ್ಟರಲ್ಲೇ ಸಿಎಂ ಕುಸಿದು ಬಿದ್ದಾಗಿತ್ತು. ಆದರೆ ಕೆಲ ನಿಮಿಷಗಳಲ್ಲಿ ಅವರು ಪುನಃ ಚೇತರಿಕೆ ಕಂಡಿದ್ದು, ಮತ್ತೆ ಭಾಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಸಿಎಂ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದ್ದು ಗಾಬರಿಯಾಗುವ ಅಗತ್ಯವಿಲ್ಲ ಎಂದು ಅಹಮದಾಬಾದ್‌ನಲ್ಲಿರುವ ಆಸ್ಪತ್ರೆಯ ಮೂಲಗಳು ಹೇಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು