Saturday, January 25, 2025
ಹೆಚ್ಚಿನ ಸುದ್ದಿ

ಜಾಮೀನು ರಹಿತ ಕೇಸ್ ದಾಖಲಿಸಿ ಬಂಧಿಸಿದ ಇಬ್ಬರನ್ನು ಬಿಡುಗಡೆಗೊಳಿಸಬೇಕೆಂದು ಅರಣ್ಯಾಧಿಕಾರಿಗಳ ವಿರುದ್ಧ ಅಮಾಸೆಬೈಲು ಗ್ರಾಮಸ್ಥರ ಆಕ್ರೋಶ-ಕಹಳೆ ನ್ಯೂಸ್

ಸಿದ್ದಾಪುರ: ವನ್ಯಜೀವಿ ವಲಯ ವಿಭಾಗದ ಅಧಿಕಾರಗಳು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಅಮಾಸೆಬೈಲು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೊಮವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮಾಸೆಬೈಲಿನ ಗೋಳಿಕಾಡು ನಿವಾಸಿ ಮಾಲತಿ ಎಂಬವರ ಮಗ ನಟರಾಜ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರು ಎರ್ ಗನ್ ಹಿಡಿದುಕೊಂಡು ರಾತ್ರಿ ಬೈಕ್ ನಲ್ಲಿ ಬಂದಿದ್ದಾರೆ ಎಂದು ತಂಡದೊ0ದಿಗೆ ಬಂದ ವನ್ಯಜೀವಿ ವಲಯ ಸಂರಕ್ಷಾಣಾ ಅಧಿಕಾರಿಯವರು ಎರ್ ಗನ್ ಮತ್ತು ಬೈಕ್ ನ್ನು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿ ಜಾಮೀನು ರಹಿತ ಕೇಸ್ ದಾಖಲಿಸಿದ್ದರು. ಆದರೆ ತನ್ನ ಮಗ ಯಾವುದೇ ಮಾರಾಕಾಸ್ತ್ರ ಹೊಂದಿರಲಿಲ್ಲ. ಯಾವುದೇ ಕಾನೂನು ವಿರೋಧಿ ಕೃತ್ಯ ಮಾಡಿಲ್ಲ, ಆತನ ಮೇಲೆ ದೌರ್ಜನ್ಯ ಎಸಲಾಗುತ್ತಿದೆ ಎಂದು ಹೇಳಿದ್ದು, ನಟರಾಜ ಮತ್ತು ಆನಂದ ಶೆಟ್ಟಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಮಾಲತಿ ಅವರು ಗ್ರಾಮಸ್ಥರೊಂದಿಗೆ ಇಂದು ಅಮಾಸೆಬೈಲು ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು