Sunday, January 19, 2025
ವಾಣಿಜ್ಯ

ಆಸಕ್ತಿಯುಳ್ಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ 3 ದಿನಗಳ ಕಾರ್ಯಾಗಾರ ! – ಕಹಳೆ ನ್ಯೂಸ್

ಪುತ್ತೂರು : ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಆಗರವಾಗಿರುವ ಪ್ರಗತಿ ಎಜ್ಯುಕೇಶನ್ ಫೌಂಡೇಶನ್(ರಿ). ಪುತ್ತೂರು ವತಿಯಿಂದ ಶಿಕ್ಷಕ/ಉಪನ್ಯಾಸಕರಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮೂರು ದಿನಗಳ ಕಾರ್ಯಗಾರ ‘TEACHER- the index of forefinger’ ಎ.8 ರಿಂದ ಎ.10ರವರೆಗೆ ಪುತ್ತೂರಿನ ಹೃದಯಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಜರುಗಲಿದೆ.

ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಅಪರಾಹ್ನ 1.00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಎ. 08ರಂದು ಖ್ಯಾತ ಸಾಹಿತಿ ಗಿರಿಮನೆ ಶ್ಯಾಮರಾವ್ ‘ಹದಿಹರೆಯದ ವಿದ್ಯಾರ್ಥಿಗಳ ಜೊತೆಗಿನ ಒಡನಾಟ’ ಎಂಬ ವಿಷಯದ ಬಗ್ಗೆ ಪ್ರಸ್ತಾಪಿಸಲಿದ್ದಾರೆ. ಎ.9ರಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಸ್ಯಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಕುಮಾರ್ ಹೆಗ್ಡೆ ‘ವ್ಯಕ್ತಿತ್ವ ವಿಕಸನ’ ವಿಷಯದ ಬಗ್ಗೆ ತರಬೇತಿ ನೀಡಲಿದ್ದಾರೆ. ಹಾಗೂ ಎ.10ರಂದು ಉಜಿರೆ ಎಸ್.ಡಿ.ಎಂ. ವಸತಿ ಕಾಲೇಜಿನ ಪ್ರಾಂಶುಪಾಲ ಡಾ| ಟಿ. ಕೃಷ್ಣಮೂರ್ತಿ ‘ಸಂವಹನಾ ಕೌಶಲ್ಯ ಹಾಗೂ ತರಗತಿ ಸವಾಲುಗಳು’ ಎಂಬ ವಿಷಯವನ್ನು ವಿಶ್ಲೇಷಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಫಲಾನುಭವಿಗಳು ಸಂಸ್ಥೆಗೆ ದೂರವಾಣಿ ಮೂಲಕ ಎ. 6 ಸಾಯಂಕಾಲ 4 ಗಂಟೆಯೊಳಗೆ ನೋಂದಯಿಸತಕ್ಕದ್ದು. ನೋಂದಾಯಿತರಿಗೆ ಮೂರೂ ದಿನಗಳ ಹಾಜರಾತಿ ಕಡ್ಡಾಯ.
ಸಂಪರ್ಕಿಸಬೇಕಾದ ಸಂಖ್ಯೆ: 08251-237143, 9480106274