ವಿವೇಕಾನಂದ ಕಾಲೇಜಿನಲ್ಲಿ ಅಂತರ್ ಕಾಲೇಜು ‘ಯೋಗಾಸನ ಸ್ಪರ್ಧೆ’, ಯೋಗಾಸನವು ಒಂದು ಪ್ರಾಥಮಿಕ ಪಾಠ; ಡಾ. ಶ್ರೀಧರ್. ಎಚ್.ಜಿ-ಕಹಳೆ ನ್ಯೂಸ್
ಪುತ್ತೂರು : ಮನಸ್ಸಿನ ಬಯಕೆ, ಏಕಾಗ್ರತೆ ಮತ್ತು ವ್ಯಕ್ತಿಯ ವಿಕಾಸವನ್ನು ಅಭಿವೃದ್ಧಿ ಪಡಿಸಲಿರುವ ಮಾರ್ಗವೇ ಈ ಯೋಗಾಸನ. ಇದನ್ನು ಎಲ್ಲರೂ ಪ್ರಾಥಮಿಕ ಪಾಠವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯವು ವೃದ್ಧಿಸುತ್ತದೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶೀಧರ್ ಎಚ್.ಜಿ. ಹೇಳಿದರು.
ವಿವೇಕಾನಂದ ಕಾಲೇಜಿನ ಕಲಾ, ವಿಜ್ಞಾನ ಮತ್ತ ವಾಣಿಜ್ಯ ಮತ್ತು ದೈಹಿಕ ಶಿಕ್ಷಣ ವಿಭಾಗಗಳ ವತಿಯಿಂದ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ‘ಯೋಗಾಸನ ಸ್ಪರ್ಧೆ’ ಯನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ಯೋಗದಲ್ಲಿ ಹಲವಾರು ಆಯಾಮಗಳು ಮತ್ತು ಆಸನಗಳು ಇವೆ. ಅದರಲ್ಲಿ ಇರುವ ಶವಾಸನ ಮನಸ್ಸನ್ನು ಏಕಾಗ್ರತೆಗೆ ತರುವ ಆಸನವಾಗಿದೆ. ಇದರಿಂದ ಸಾಮಾಜಿಕ ಶಿಸ್ತುವಿನ ಜೊತೆಗೆ ನಮ್ಮನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಶಿವಪ್ರಸಾದ.ಕೆ.ಯನ್. ಮಾತನಾಡಿ, ಸಾವಿರ ವರುಷಗಳ ಇತಿಹಾಸ ಇರುವ ಯೋಗಾಸನವನ್ನು ಹೊರದೇಶದ ಜನರು ತಮ್ಮ ದಿನನಿತ್ಯ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಭಾರತೀಯರಾದ ನಾವು ಯೋಗಾಸನವನ್ನು ಕಲಿತು, ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಕುಮಾರ್ ಬಿ. ಮತ್ತು ಪುತ್ತೂರಿನ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಬ್ದುಲ್ ಕುಜ್ಞ ಉಪಸ್ಥಿತರಿದ್ದರು. ವಿವೇಕಾನಂದ ಕಾಲೇಜಿನ ದೈಹಿಕ ನಿರ್ದೇಶಕ ರವಿಶಂಕರ ವಿ.ಎಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.