Sunday, January 26, 2025
ಹೆಚ್ಚಿನ ಸುದ್ದಿ

ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ವಿವಿಧ ಮನೆ ನಿರ್ಮಾಣಕ್ಕೆ ಸಾಮಾಗ್ರಿ ವಿತರಣೆ ಮಾಡಿದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ-ಕಹಳೆ ನ್ಯೂಸ್

ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಹಲವು ಬಡವರ ಮನೆ ನಿರ್ಮಾಣಕ್ಕೆ ಸಾಮಾಗ್ರಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಯಾಪು ಗ್ರಾಮದ ಸಂಟ್ಯಾರು ನಿವಾಸಿ ಅಬ್ದುಲ್ ಅಝಿಝ್ ರವರ ಮನೆ ನಿರ್ಮಾಣಕ್ಕೆ ಸಿಮೆಂಟ್,

ಇರ್ದೆ ಜೋಗಿಮೂಲೆ ನಿವಾಸಿ ಪ್ರಭಾವತಿಯವರ ಮನೆ ಛಾವಣಿಗೆ ಸಿಮೆಂಟ್ ಶೀಟ್, ಬನ್ನೂರು ನವಾಸಿ ಮಾಲತಿಯವರ ಮನೆ ಛಾವಣಿಗೆ ಸಿಮೆಂಟ್ ಶೀಟ್, ನರಿಮೊಗರು ಬೀಟಿಕಾಡು ನಿವಾಸಿ ಜಯರವರ ಮನೆ ನಿರ್ಮಾಣಕ್ಕೆ ಒಂದು ಲೋಡ್ ಕೆಂಪು ಕಲ್ಲು,

 

ಕಡಬ ನಿವಾಸಿ ಕುಸುಮರವರಿಗೆ ನೀರಿನ ಟ್ಯಾಂಕಿ, ಇಡ್ಕಿದ್ದು ಸೂರ್ಯ ನಿವಾಸಿ ವಸಂತಿಯವರ ಮನೆ ನಿರ್ಮಾಣಕ್ಕೆ ಸಿಮೆಂಟ್, 2 ದಾರಂದ, ಒಂದು ಲೋಡ್ ಕೆಂಪು ಕಲ್ಲು, ಶಾಂತಿಗೋಡು ಮರಕ್ಕೂರು ನಿವಾಸಿ ರಘುನಾಥರವರ ಮನೆ ದುರಸ್ತಿಗೆ ಸಿಮೆಂಟ್,

ನರಿಮೊಗರು ಮುಕ್ವೆ ನಿವಾಸಿ ವಿದ್ಯಾರವರ ಮನೆ ನಿರ್ಮಾಣಕ್ಕೆ ಸಿಮೆಂಟ್ , ಕಲ್ಲೆಗ ನಿವಾಸಿ ಮಿನ್ಕ ರವರ ಮನೆ ನಿರ್ಮಾಣಕ್ಕೆ ಒಂದು ಲೋಡ್ ಕೆಂಪು ಕಲ್ಲು ಒದಗಿಸಿದರು.