Sunday, January 26, 2025
ಹೆಚ್ಚಿನ ಸುದ್ದಿ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ದೇಣಿಗೆ ನೀಡಿದ ಚೆನ್ನೈಯ ಮುಸ್ಲಿಂ ಉದ್ಯಮಿ-ಕಹಳೆ ನ್ಯೂಸ್

ಚೆನ್ನೈ : ಚೆನ್ನೈಯ ಮುಸ್ಲಿಂ ಉದ್ಯಮಿಯೊಬ್ಬರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ತಮಿಳುನಾಡಿನ ಭಕ್ತರಿಂದ ಸ್ವಯಂಪ್ರೇರಿತ ಕೊಡುಗೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಕೋಮು ಸೌಹಾರ್ದತೆಯನ್ನು ಗುರಿಯಾಗಿಟ್ಟುಕೊಂಡು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ದೇಣಿಗೆ ನೀಡಿದ ಪ್ರಾಪರ್ಟಿ ಡೆವಲಪರ್ ಹಬೀಬ್ ಅವರು , ನಾನು ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಕೋಮು ಸೌಹಾರ್ದತೆಯನ್ನು ಬೆಳೆಸಲು ಬಯಸುತ್ತೇನೆ. ನಾವೆಲ್ಲರೂ ದೇವರ ಮಕ್ಕಳು. ಈ ನಂಬಿಕೆಯೊಂದಿಗೆ ನಾನು ಈ ಮೊತ್ತವನ್ನು ದಾನ ಮಾಡಿದ್ದೇನೆ. ಕೆಲವು ಕಡೆಗಳಿಂದ ಮುಸ್ಲಿಮರನ್ನು ಹಿಂದೂ ವಿರೋಧಿ ಅಥವಾ ಭಾರತ ವಿರೋಧಿ ಎಂದು ಚಿತ್ರಿಸುವುದನ್ನು ನೋಡಿ ನೋವು ಅನುಭವಿಸಿದ್ದೇನೆ ಎಂದು ಹೇಳಿದರು. ಇನ್ನು ಒಳ್ಳೆಯ ಕಾರಣಕ್ಕಾಗಿ ದಾನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ, ನಾನು ಬೇರೆ ಯಾವುದೇ ದೇವಸ್ಥಾನಕ್ಕೆ ದಾನ ಮಾಡುತ್ತಿರಲಿಲ್ಲ ಆದರೆ ದಶಕಗಳಷ್ಟು ಹಳೆಯದಾದ ಅಯೋಧ್ಯೆ ವಿವಾದ ಕೊನೆಗೊಂಡಿರುವ ರಾಮ ಮಂದಿರ ನಿರ್ಮಾಣವು ವಿಭಿನ್ನ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು