Sunday, January 26, 2025
ಹೆಚ್ಚಿನ ಸುದ್ದಿ

ಮದುವೆಗೆ ಒಪ್ಪಿದರೂ ವಿಳಂಬ ಮಾಡಿದ ಪೋಷಕರು; ಮನೆ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ-ಕಹಳೆ ನ್ಯೂಸ್

ಕಲಬುರಗಿ : ಮಾನಶಿವನಗಿ ಗ್ರಾಮದ 23 ವರ್ಷ ವಯಸ್ಸಿನ ಪರಶುರಾಮ ಪೂಜಾರಿ ಮತ್ತು 19 ವರ್ಷದ ವಯಸ್ಸಿನ ಭಾಗ್ಯಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗ ಕೂಡ ಆಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಪ್ರೀತಿ ಮನೆಯವರಿಗೂ ತಿಳಿದು, ಮನೆಯವರು ಕೂಡ ಇವರ ಪ್ರೀತಿಗೆ ಒಪ್ಪಿದರು. ಆದರೆ, ಮದುವೆ ಈಗ ಬೇಡ ಸ್ವಲ ದಿನ ಕಳೆಯಲಿ ಎಂದು ಮನೆಯವರು ಹೇಳಿದ್ದಾರೆ. ಇದಕ್ಕೆ ನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಿರುವಾಗ ಫೆಬ್ರವರಿ 11 ರಂದು ಪರಶುರಾಮ ಮತ್ತು ಭಾಗ್ಯಶ್ರೀ ನಾಪತ್ತೆಯಾಗಿದ್ದು, ನಿನ್ನೆ ಸಂಜೆ ಯಡ್ರಾಮಿ ಪಟ್ಟಣದ ಹೊರವಲಯದ ಹಳ್ಳದಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಇವರಿಬ್ಬರ ಮೃತದೇಹ ಪತ್ತೆಯಾಗಿದೆ. ಹಿರಿಯರ ಜೊತೆ ಚರ್ಚೆ ಮಾಡಿ ಮತ್ತೆ ಮದುವೆ ಮಾಡಿದರಾಯ್ತು ಎಂದು ಮನೆಯವರು ಉದಾಸೀನ ತೋರಿದ್ದನ್ನು ಕಂಡ ಈ ಜೋಡಿ, ನಮ್ಮನ್ನು ಮನೆಯವರು ದೂರ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಅನುಮಾನ ಬಂದಿದೆ. ಹಾಗಾಗಿ ಫೆಬ್ರವರಿ 11 ರಂದು ಇವರು ಮನೆ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು