Monday, January 27, 2025
ಪುತ್ತೂರು

ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನಡೆದರೆ ಯಶಸ್ಸು ಸಾಧ್ಯ ; ಭವ್ಯ ಪಿ. ಆರ್. ನಿಡ್ಪಳ್ಳಿ-ಕಹಳೆ ನ್ಯೂಸ್

ಪುತ್ತೂರು : ಸಾಹಿತ್ಯವು ಬರಹಗಾರರಿಗೆ ಹಾಗೂ ಓದುಗರಿಗೆ ಆನಂದ ದೊರಕಿಸುವಂತಿರಬೇಕು. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಂದರ್ಭದಲ್ಲಿ ದೊರೆತ ವೇದಿಕೆಗಳನ್ನು ಅದ್ಭುತ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು, ನ್ಯಾಯ ಒದಗಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಹಿತ್ಯ ಎಂಬುದು ಸಂವಹನದ ಮಾಧ್ಯಮ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ. ಆರ್. ನಿಡ್ಪಳ್ಳಿ ಹೇಳಿದರು. ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ತೃತೀಯ ಐಚ್ಛಿಕ ವಿದ್ಯಾರ್ಥಿಗಳು ಆಯೋಜಿಸುವ ‘ಸಾಹಿತ್ಯ ಮಂಟಪ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಕ್ರವಾರ ಅವರು ಮಾತನಾಡಿದರು. ಒಬ್ಬ ಉತ್ತಮ ಬರಹಗಾರ ಮೊದಲು ಅತ್ಯುತ್ತಮ ಓದುಗಾರನಾಗಿರಬೇಕು. ಸೂಕ್ತ ರೀತಿಯ ಪೂರ್ವ ತಯಾರಿ ಹಾಗೂ ಮಾರ್ಗದರ್ಶನದಿಂದ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೇಮ ಬೆಳೆಸುವಲ್ಲಿ ಕಾಲೇಜಿನ ಕನ್ನಡ ಸಂಘದ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಸಾಹಿತಿಗಳಾದ ಶ್ರೀಧರ್ ಶೆಟ್ಟಿ, ಬೃಂದಾ ಪಿ. ಮುಕ್ಕೂರು, ಶ್ವೇತಾ, ನಮಿತಾ, ನಿರೀಕ್ಷಾ, ಶುಭ್ರ ಪುತ್ರಕಳ ಇವರು ತಮ್ಮ ಸ್ವರಚಿತ ಕವನ ಹಾಗೂ ಲೇಖನಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್. ಹೆಚ್. ಜಿ, ಕನ್ನಡ ಸಂಘದ ಸಂಯೋಜಕಿ ಡಾ. ಗೀತಾ ಕುಮಾರಿ. ಟಿ, ಸಂಘದ ಕಾರ್ಯದರ್ಶಿ ಚೆನ್ನ ಬಸವ ಉಪಸ್ಥಿತರಿದ್ದರು. ಕನ್ನಡ ಸಂಘದ ಕಾರ್ಯದರ್ಶಿ ಶಶಿಧರ್ ನಾಯ್ಕ್ ಸ್ವಾಗತಿಸಿದರು. ತೃತೀಯ ಬಿಎ ಐಚ್ಛಿಕ ವಿದ್ಯಾರ್ಥಿಗಳಾದ ಚರಿಷ್ಮಾ. ಡಿ. ಜಿ ವಂದಿಸಿ, ಸೌಜನ್ಯ ಬಿ. ಎಂ. ಕೆಯ್ಯೂರು ಕಾರ್ಯಕ್ರಮ ನಿರೂಪಿಸಿದರು.