ಪುತ್ತೂರು : ಹೊರ ಸಂಚಾರದಂತಹ ಚಟುವಟಿಕೆಗಳು ಕೇವಲ ಮನೋರಂಜನೆಗಾಗಿ ಅಲ್ಲದೆ ದೈಹಿಕ ಆರೋಗ್ಯಗಳ ಜೊತೆಗೆ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಮ್ಮನ್ನು ಬಲಪಡಿಸುತ್ತದೆ.
ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಬಹಳಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಮೆಚ್ಚುಗೆಯನ್ನು ಗಳಿಸಿದ್ದೀರಿ. ನಿಮ್ಮ ಸೇವೆ ಚಟುವಟಿಕೆ ನಿರಂತರವಾಗಲಿ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಹೇಳಿದರು. ಅವರು ಕಾಲೇಜಿನ ವಿವೇಕಾನಂದ ರೋವರ್ಸ್ ಹಾಗೂ ನಿವೇದಿತಾ ರೇಂಜರ್ಸ್ ತಂಡ ಏರ್ಪಡಿಸಿದ್ದ ‘ಹೈಕಿಂಗ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಕಾರ್ಯಕ್ರಮವನ್ನು ಭಾರತ್ ಸ್ಕೌಟ್ ಗೈಡ್ ಪ್ರಾರ್ಥನೆಯ ಮೂಲಕ ಪ್ರಾರಂಭಿಸಲಾಯಿತು. ಕಾಲೇಜಿನ ರೇಂಜರ್ಸ್ ಹಾಗೂ ರೋವರ್ಸ್ ತಂಡಗಳ ಸಂಯೋಜಕಿ ದೀಪಿಕಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಮತ್ತೋರ್ವ ಸಂಯೋಜಕಿ ದಿವ್ಯ ವಂದಿಸಿದರು. ಸಂಯೋಜಕ ಈಶ್ವರ್ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.