Sunday, November 24, 2024
ಬೆಳ್ತಂಗಡಿ

Breaking News : ಎಳನೀರು ಬಂಗಾರ ಪಲ್ಕೆ ಫಾಲ್ಸ್ ದುರಂತದಲ್ಲಿ ಕಣ್ಮರೆಯಾಗಿದ್ದ ಸನತ್ ಶೆಟ್ಟಿ ಮೃತದೇಹ ಸತತ 23 ದಿನಗಳ ಕಾರ್ಯಾಚರಣೆ ಬಳಿಕ ಪತ್ತೆ – ಕಹಳೆ ನ್ಯೂಸ್

ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದಿಂದ ಮಣ್ಣಿನಡಿ ಕಣ್ಮರೆಯಾದ ವಿದ್ಯಾರ್ಥಿ ದೇಹ ಫೆ.16 ರಂದು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ(20) ದೇಹ ಮಣ್ಣು ಕಲ್ಲುಬಂಡೆಯಡಿ ಸುಲುಕಿದ್ದರಿಂದ ಸತತ 23 ದಿನಗಳ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ. ಬಂಡೆಕಲ್ಲು ಒಡೆದು ಜೆಸಿಬಿ, ಹಿಟಾಚಿ 22 ದಿನ ಸುಮಾರು 30 ಅಡಿಗಳಷ್ಟು ಆಳದ ಮಣ್ಣು ತೆರವು ಕಾರ್ಯ ಸತತ ನಡೆದಿತ್ತು.

ವಿದ್ಯುತ್ ಸಂಪರ್ಕವಾಗಲಿ, ಯಂತ್ರೋಪಕರಣ ಬಳಸಲು ಸಾಧ್ಯವಿಲ್ಲದ ದುರ್ಗಮ ಸ್ಥಳವಾದ್ದರೂ ಜಿಲ್ಲಾಡಳಿತ, ಶಾಸಕರು, ಸ್ಥಳೀಯರು, ಸಂಘ ಸಂಸ್ಥೆಗಳ ಸಹಕಾರದಿಂದ ದೇಹ ಶೋಧ ಕಾರ್ಯದ ಎಲ್ಲ ಪ್ರಯತ್ನಗಳು ನಡೆದಿದ್ದವು. ಒಂದೆರಡು ಸಲ ವಾಸನೆ ಬಂದಿತ್ತಾದರೂ ದೇಹ ಪತ್ತೆಯಾಗದೆ ಪ್ರಕರಣ ಕಗ್ಗಂಟಾಗಿತ್ತು. ಇದೀಗ ಎಲ್ಲರ ಹಾರೈಕೆ ಫಲಿಸಿದ್ದು ಕಡೆಗೂ ಸನತ್ ಶೆಟ್ಟಿ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ವೈದ್ಯಕೀಯ ತಂಡ ಭೇಟಿ ನೀಡಲಿದೆ. ಮುಂದಿನ ಕಾರ್ಯಕ್ಕೆ ಪೊಲೀಸ್ ಇಲಾಖೆ ಪೂರ್ವ ಸಿದ್ಧತೆ ನಡೆಸಿದೆ.